ಮಜಿ ವೀರಕಂಬ ಶಾಲೆಯಲ್ಲಿ ಡಿ.8 ರಂದು ನಡೆಯಲಿದೆ ಸಭಾಂಗಣ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ, ಶಾಲಾ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ -ಕಹಳೆ ನ್ಯೂಸ್
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಬ ಇಲ್ಲಿ ದಿನಾಂಕ 8- 12 -2019 ನೇ ಆದಿತ್ಯವಾರ 10:30 ಗಂಟೆಗೆ ಶಾಲಾ ಶತಮಾನ ಪ್ರಯುಕ್ತ ಎಂ ಆರ್ ಪಿ ಎಲ್ ಮಂಗಳೂರು ವತಿಯಿಂದ 64 ಲಕ್ಷ 60 ಸಾವಿರ ವೆಚ್ಚದಲ್ಲಿ 10 ಕೊಠಡಿಗಳು ಹಾಗೂ ಶಾಲಾ ದತ್ತು ಸಂಸ್ಥೆಯಾದ ಮಾತಾ ದೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಸುರತ್ಕಲ್ ವತಿಯಿಂದ ಸಭಾಂಗಣ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ಹಾಗೂ ಶಾಲಾ 99 ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ಜರಗಲಿರುವುದು.
ಈ ಕಾರ್ಯಕ್ರಮದಲ್ಲಿ ಕಟ್ಟಡ ಶಿಲಾನ್ಯಾಸವನ್ನು ಮಾನ್ಯ ದಕ್ಷಿಣ ಕನ್ನಡ ಉಸ್ತುವಾರಿ ,ಮುಜರಾಯಿ, ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಾನ್ಯ ಬಂಟ್ವಾಳ ಶಾಸಕರಾದ ಶ್ರೀಯುತ ರಾಜೇಶ್ ನಾಯಕ್ ಉಳಿಪಾಡಿಗುತ್ತು ವಹಿಸಲಿದ್ದು ಕಾರ್ಯಕ್ರಮದಲ್ಲಿ ಮಂಗಳೂರು ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್ ,ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷ ಶ್ರೀಮತಿ ಕಸ್ತೂರಿ ಪಂಜ ,ಜಿಲ್ಲಾ ಪಂಚಾಯತ್ ಸದಸ್ಯ ಶ್ರೀಮತಿ ಮಂಜುಳಾ ಮಾವೆ, ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ್ ಕರ್ಕೇರಾ, ಉಪಾಧ್ಯಕ್ಷ ಅಬ್ಬಾಸ್ ಆಲಿ, ತಾಲೂಕು ಪಂಚಾಯತ್ ಸದಸ್ಯೆ ಶ್ರೀಮತಿ ಗೀತಾ ಚಂದ್ರಶೇಕರ್, ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಮತಿ ಪ್ರೇಮಲತಾ, ಉಪಾಧ್ಯಕ್ಷರು ವಿ ಕೆ ಅಬ್ಬಾಸ ಹಾಗೂ ಗ್ರಾಮ ಪಂಚಾಯತ್ ಸದಸ್ಯರುಗಳಾದ ಶ್ರೀಮತಿ ಜಯಂತಿ ಜನಾರ್ಧನ, ಶ್ರೀಮತಿ ಪದ್ಮಾವತಿ , ಶ್ರೀಮತಿ ಜಯಂತಿ, ಜನಾರ್ದನ ಪೂಜಾರಿ , ರಾಮಚಂದ್ರ ಪ್ರಭು, ನಿಶಾಂತ್ ರೈ,ಹೊನ್ನಪ್ಪ ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ಶಾಲಾ ದತ್ತು ಸಂಸ್ಥೆಯ ಮಾಲಕ ಏನ್ ಸಂತೋಷ್ ಕುಮಾರ್ ಶೆಟ್ಟಿ ,ಕಾರ್ಯನಿರತ ಪತ್ರಕರ್ತರ ಸಂಘದ ಬಂಟ್ವಾಳದ ಅಧ್ಯಕ್ಷ ಹರಿಷ್ ಮಾಂಬಡಿ, ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಮೇಲ್ಕಾರ್ ,ರೋಟರಿ ಟೌನ್ ಅಧ್ಯಕ್ಷ ಜಯರಾಜ್ ಎಸ್ ಬಂಗೇರ ಬಂಟ್ವಾಳ ವಲಯ ಫೋಟೋಗ್ರಾಫರ್ಸ್ ಅಧ್ಯಕ್ಷ ವಿ ಕುಮಾರಸ್ವಾಮಿ, ಪ್ರಗತಿಪರ ಕೃಷಿಕರಾದ ತಿರುಮಲ ಕುಮಾರ್ ಮಾಜಿ ,ಈಶ್ವರ ಭಟ್ ನಗ್ರಿ ಮೂಲೆ ,ನಿವೃತ್ತ ಮುಖ್ಯಶಿಕ್ಷಕ ವಿಠ್ಠಲಶೆಟ್ಟಿ, ವೀರಕಂಭ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ದಿಲೀಪ್ ಕುಮಾರ್, ಕೇಂದ್ರ ಸಹಕಾರಿ ಬ್ಯಾಂಕಿನ ನಿವೃತ್ತ ಡಿಡಿಜಿಎಂ ಉಗ್ಗಪ್ಪ ಶೆಟ್ಟಿ ಕೊಂಬಿಲ, ವಿಟ್ಲ ಗ್ರಾಮೀಣ ಬ್ಯಾಂಕ್ ನಿರ್ದೇಶಕ ವಿಶ್ವನಾಥ ಎಂ ಮೊದಲಾದವರು ಉಪಸ್ಥಿತರಿರುವರು ಎಂದು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಸಂಜೀವ್ ಮೂಲ್ಯ ತಿಳಿಸಿರುತ್ತಾರೆ