Tuesday, January 21, 2025
ಸುದ್ದಿ

ವಿಶ್ವ ಹಿಂದೂ ಪರಿಷತ್ ಬಜರಂಗದಳ ಮಾತೃಶಕ್ತಿ ದುರ್ಗಾ ವಾಹಿನಿ ಪುತ್ತೂರು ವತಿಯಿಂದ ಅತ್ಯಾಚಾರ ವಿರೋಧಿಸಿ  ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ರಾಷ್ಟ್ರಪತಿಗಳಿಗೆ ಪುತ್ತೂರು ಸಹಾಯಕ ಕಮೀಷನರ್ ಕಛೇರಿ ಮೂಲಕ ಮನವಿ- ಕಹಳೆ ನ್ಯೂಸ್

ಹೈದರಾಬಾದ್ ನಲ್ಲಿ ಸಹೋದರಿ ಪ್ರಿಯಾಂಕ ರೆಡ್ಡಿ ಮತ್ತು ರೋಜಾ ರವರ ಮೇಲೆ ನಡೆದ ಅತ್ಯಾಚಾರ ಹಾಗು ಬರ್ಬರ ಹತ್ಯೆಯ ವಿರುದ್ದ ಮತ್ತು ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಮಾತೃಶಕ್ತಿ ದುರ್ಗಾ ವಾಹಿನಿ ಪುತ್ತೂರು ವತಿಯಿಂದ ರಾಷ್ಟ್ರಪತಿಗಳಿಗೆ ಪುತ್ತೂರು ಸಹಾಯಕ ಕಮೀಷನರ್ ಕಛೇರಿ ಮೂಲಕ ಬುಧವಾರದಂದು ಮನವಿ ಸಲ್ಲಿಸಲಾಯಿತು.
ದುರ್ಗಾವಾಹಿನಿ ಪ್ರಾಂತ ಸಂಯೋಜಕಿ ವಿಧ್ಯಾ ಮಲ್ಯ ಇವರು ಅತ್ಯಾಚಾರ ಪ್ರಕರಣದಲ್ಲಿ ಕಠಿಣ ಹಾಗೂ ತ್ವರಿತ ಶಿಕ್ಷೆ ಆಗುವ ಕಾನೂನು ತರಬೇಕೆಂದು ಆಗ್ರಹಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ನಂತರ ಸಹಾಯಕ ಕಮೀಷನರ್ ಕಛೇರಿಯಲ್ಲಿ ಮನವಿ ಸಲ್ಲಿಸಲಾಯಿತು.

ಇ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಜಿಲ್ಲಾ ಅಧ್ಯಕ್ಷರಾದ ಡಾ ಕೃಷ್ಣ ಪ್ರಸನ್ನ,ಪುತ್ತೂರು ಜಿಲ್ಲಾ ಕಾರ್ಯದರ್ಶಿ ಸತೀಶ್ ಬಿ ಎಸ್,ಸೇವಾ ಪ್ರಮುಖ್ ನರಸಿಂಹ ಪೂಂಜಾ,ಜಿಲ್ಲಾ ಮಾತೃಶಕ್ತಿ ಪ್ರಮುಖ್ ಪ್ರೇಮಲತಾ ರಾವ್,ದುರ್ಗಾವಾಹಿನಿ ಪ್ರಮುಖ್ ಅರ್ಪಣಾ,ಮೋಹಿನಿ ದಿವಾಕರ್,ಸುಕಿರ್ತಿ,ಪ್ರಭಾ ಆಚಾರ್ಯ,ಜ್ಯೋತಿ ನಾಯಕ್,ಜಯಂತಿ ನಾಯಕ್,ಸುಚೇತ,ಪ್ರೇಮಾ ನಂದಿಲ,ಗೌರಿ ಬನ್ನೂರು, ಬಜರಂಗದಳದ ಪುತ್ತೂರು ಜಿಲ್ಲಾ ಸಂಚಾಲಕ ಶ್ರೀಧರ್ ತೆಂಕಿಲ,ವಿಶ್ವ ಹಿಂದೂ ಪರಿಷತ್ ಪ್ರಮುಖ್ ಕೃಷ್ಣ ಪ್ರಸಾದ್ ಬೆಟ್ಟ,ಜಿಲ್ಲಾ ಸಾಪ್ತಾಹಿಕ ಮಿಲನ್ ಪ್ರಮುಖ್ ಜೀತೆಶ್ ಬಲ್ನಾಡ್,ಪುತ್ತೂರು ಪ್ರಖಂಡ ಸಂಚಾಲಕ ಹರೀಶ್ ಕುಮಾರ್ ದೂಳ್ಪಾಡಿ,ಸುರಕ್ಷಾ ಪ್ರಮುಖ್ ಪ್ರವೀಣ್ ಕಲ್ಲೇಗ,ಮಧುಸೂಧನ್ ಪಡ್ಡಾಯೂರು,ರಂಜಿತ್,ಸುಬ್ರಹ್ಮಣ್ಯ ಕಬಕ,ಚೇತನ್ ಬೊಳ್ವಾರ್,ಸಚಿನ್,ರವಿಕುಮಾರ್ ಹಾಗೂ ಬಜರಂಗದಳ ದುರ್ಗಾವಾಹಿನಿ ,ಮಾತೃಮಂಡಳಿಯ ಕಾರ್ಯಕರ್ತರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು