Recent Posts

Tuesday, January 21, 2025
ಸುದ್ದಿ

‘ಕಾಂಡೋಮ್ ನೀಡಿ ರೇಪಿಸ್ಟ್ ಗಳಿಗೆ ಸಹಕರಿಸಿ, ಹಿಂಸೆಯಿಲ್ಲದ ಅತ್ಯಾಚಾರ ಕಾನೂನುಬದ್ಧಗೊಳಿಸಿ’ ಎಂದ ನಿರ್ದೇಶಕ – ಕಹಳೆ ನ್ಯೂಸ್

ಹೈದರಾಬಾದ್, ಡಿ 4 : ಹೈದರಾಬಾದ್ ಪಶುವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣದ ಬಗ್ಗೆ ಇಡೀ ರಾಷ್ಟ್ರವ್ಯಾಪ್ತಿ ಖಂಡನೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಚಲನಚಿತ್ರ ನಿರ್ಮಾಪಕ ಡೇನಿಯಲ್ ಶ್ರವಣ್ ಎಂಬವರು, “ಹಿಂಸೆಯಿಲ್ಲದ ರೇಪ್ ಕಾನೂನುಬದ್ಧಗೊಳಿಸಬೇಕು ” ಅತಿರೇಕದ ಸಲಹೆ ನೀಡಿದ್ದು ಇದರ ವಿರುದ್ದ ವ್ಯಾಪಕ ಟೀಕೆ ವ್ಯಕವಾಗಿದೆ. ಇಷ್ಟು ಮಾತ್ರವಲ್ಲ ಮಹಿಳೆಯರಿಗೆ ಅತಿರೇಕದ, ತೀರಾ ಕೀಳುಮಟ್ಟದ ಅಸಹ್ಯಕರ ಸಲಹೆ ನೀಡಿದ್ದು ” ಪೊಲೀಸ್ ಸಹಾಯಕ್ಕಾಗಿ ಕರೆ ಮಾಡುವ ಬದಲು, ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದಂತಹ ಸಂದರ್ಭಗಳನ್ನು ನಿಭಾಯಿಸಲು, ಮಹಿಳೆಯರು ತಮ್ಮ ಬಳಿ ಕಾಂಡೋಮ್ ಇಟ್ಟುಕೊಂಡಿರಬೇಕು ಮಾತ್ರವಲ್ಲದೆ ಈ ಕೃತ್ಯಕ್ಕೆ ಸಹಕರಿಸಿ ಅತ್ಯಾಚಾರಿಗಳಿಗೆ ಕಾಂಡೋಮ್ ನೀಡಬೇಕು. ಹೀಗೆ ಮಾಡಿದ್ರೆ ಸಂತ್ರಸ್ತರು ಕೊಲೆಯಾಗುವ ತಮ್ಮ ಹಣೆಬರಹದಿಂದ ತಪ್ಪಿಸಿಕೊಳ್ಳಲು ಸಾಧ್ಯ. ಇದು ಅತ್ಯಾಚಾರಕ್ಕೊಳಗಾದವರ ಕ್ರೂರ ಹತ್ಯೆಗಳನ್ನು ನಿಯಂತ್ರಿಸುವ ಏಕೈಕ ಮಾರ್ಗವಾಗಿದೆ ಎಂಬ ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹತ್ಯೆ ಎನ್ನುವುದು ಪಾಪ ಮತ್ತು ಅಪರಾಧವಾಗಿದೆ. ಅಚ್ಯಾಚಾರ ಎನ್ನುವುದು ಸರಿಪಡಿಸುವಿಕೆಯ ಶಿಕ್ಷೆಯಾಗಿದೆ. ನಿರ್ಭಯ ಕಾಯ್ದೆ ಅಥವಾ ಪ್ರಿಯಾಂಕಾ ಕಾಯ್ದೆಯಿಂದ ನ್ಯಾಯ ದೊರಕುವುದಿಲ್ಲ. ಸಮಯ ಅಥವಾ ಮನಸ್ಥಿತಿಯನ್ನು ಆಧರಿಸಿ ಅತ್ಯಾಚಾರಿಗಳು ತಮ್ಮ ಲೈಂಗಿಕ ಅಗತ್ಯವನ್ನು ಪೂರೈಸಿಕೊಳ್ಳುವುದೇ ಅತ್ಯಾಚಾರ ಅಜೆಂಡಾ ಆಗಿದೆ ಎಂದು ಚಲನಚಿತ್ರ ನಿರ್ಮಾಪಕ ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಇವರ ವಿಲಕ್ಷಣ ಸಲಹೆಗಳು ಇಲ್ಲಿಗೆ ಕೊನೆಯಾಗದೇ, ಮುಂದುವರಿಸಿ” ಮಹಿಳೆಯರನ್ನು ಕೀಳಾಗಿ ಉಲ್ಲೇಖಿಸಿ, ಅತ್ಯಾಚಾರಿಗಳು ಮಾಡಿದ ಪ್ರಸ್ತಾಪಕ್ಕೆ ಸಮ್ಮತಿಸದಿದ್ದರೆ, ಅವರಿಗೆ ಅತ್ಯಾಚಾರ ಮಾಡುವುದನ್ನು ಬಿಟ್ಟು ಬೇರೆ ವಿಧಿಯಿಲ್ಲ ಎಂದು ಬರೆದುಕೊಂಡಿದ್ದಾರೆ. ನೆಟ್ಟಿಗರು ಈತನ ವಿರುದ್ದ ರೊಚ್ಚಿಗೆದ್ದ ಬಳಿಕ ” ಅಸಹ್ಯಕರ ಪೋಸ್ಟ್ “ಡಿಲೀಟ್ ಮಾಡಿ ಕ್ಷಮೆಯಾಚಿಸುವ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ. ಮಾತ್ರವಲ್ಲದೇ ತಮ್ಮ ಪೋಸ್ಟ್ ನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ ಸೇಕ್ರೆಡ್ ಗೇಮ್ಸ್ ನಟಿ ಕುಬ್ರಾ ಸೇಟ್ ಕೂಡ ಅವರಿಗೆ “ವೈದ್ಯಕೀಯ ಸಹಾಯದ ಅಗತ್ಯವಿದೆ” ಎಂದು ಪೋಸ್ಟ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು