Tuesday, January 21, 2025
ಸುದ್ದಿ

ಪುತ್ತೂರು: ಮಗನಿಂದ ತಂದೆಯ ಹತ್ಯೆ-ಕಹಳೆ ನ್ಯೂಸ್

ಪುತ್ತೂರು: ಮಗನೋರ್ವ ತನ್ನ ತಂದೆಯನ್ನೇ ಕತ್ತಿಯಿಂದ ಕಡಿದು ಕೊಂದ ಘಟನೆ ಬುಧವಾರ ರಾತ್ರಿ ಪುತ್ತೂರಿನಲ್ಲಿ 

ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಹತ್ಯೆಗೊಳಗಾದ ವ್ಯಕ್ತಿಯನ್ನು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪಾಣಾಜೆ ಗ್ರಾಮದ ಬೊಳ್ಳಿಂಬಳದ ನಿವಾಸಿಯಾಗಿರುವ ಕೃಷ್ಣ ನಾಯ್ಕ್ (65) ಎಂದು ಗುರುತಿಸಲಾಗಿದೆ. ಅವರ ಪುತ್ರ ಉದಯ ನಾಯ್ಕ್ (28) ಯಾವುದೇ ಕೆಲಸಕ್ಕೆ ಹೋಗದೇ ಮನೆಯಲ್ಲಿರುತ್ತಿದ್ದು, ಈ ಬಗ್ಗೆ ತಂದೆ ಮತ್ತು ಮಗನಿಗೆ ಪದೇ ಪದೇ ಜಗಳವಾಗುತ್ತಿತ್ತೆನ್ನಲಾಗಿದೆ. ಬುಧವಾರ ರಾತ್ರಿ ಇದೇ ವಿಷಯಕ್ಕೆ ತಕರಾರು ಎತ್ತಿದ್ದು, ಕುಪಿತನಾದ ಉದಯ ನಾಯ್ಕ್ ನು ಮನೆಯಲ್ಲಿದ್ದ ಮಚ್ಚಿನಿಂದ ತಂದೆ ಕೃಷ್ಣ ನಾಯ್ಕ್ ರವರ ಕುತ್ತಿಗೆಗೆ ಕಡಿದಿದ್ದು, ಇದರಿಂದ ಗಂಭೀರ ಗಾಯಗೊಂಡ ಕೃಷ್ಣ ನಾಯ್ಕ್ ರವರು ಮನೆಯ ಅಂಗಳದಲ್ಲೇ ಕುಸಿದು ಮೃತಪಟ್ಟಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದಿದ್ದು, ಆರೋಪಿ ಉದಯ ನಾಯ್ಕ್ ನನ್ನು ಬಂಧಿಸಲಾಗಿದೆ.