Wednesday, January 22, 2025
ಸುದ್ದಿ

ಚಲಿಸುತ್ತಿದ್ದ ಕಾರ್ ಗೆ ಬೆಂಕಿ ತಗುಲಿ ಮಹಿಳೆ ಸಜೀವ ದಹನ – ಕಹಳೆ ನ್ಯೂಸ್

ಬೀದರ್ : ಒಂದೇ ಕುಟುಂಬದ ನಾಲ್ವರು ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ತಗುಲಿದ ಪರಿಣಾಮ ಕಾರ್ ನಲ್ಲಿದ್ದ ಮಹಿಳೆ ಸಜೀವ ದಹನವಾಗಿರುವ ಘಟನೆ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ನೀರ್ಣಾ ಕ್ರಾಸ್ ನ ರಾಷ್ಟ್ರೀಯ ಹೆದ್ದಾರಿ 9 ರಲ್ಲಿ ನಡೆದಿದೆ.

ಕಾರ್ ಚಲಾಯಿಸುತ್ತಿದ್ದ ಕಲ್ಯಾಣಿ ಸಜೀವ ದಹನವಾಗಿರುವ ಮಹಿಳೆಯಾಗಿದ್ದು, ಮಹಾರಾಷ್ಟ್ರದ ಲಾತೂರ್ ನಿಂದ ಹೈದರಾಬಾದ್ ಗೆ ತೆರಳುತ್ತಿದ್ದ ಸಂದರ್ಭದಲ್ಲಿ ಬೆಂಕಿ ತಗುಲಿದ್ದು, ಕ್ಷಣಾರ್ಧದಲ್ಲಿ ಕಾರ್ ಹೊತ್ತಿ ಉರಿದಿದೆ. ಕಾರ್ ನ ಹಿಂಬದಿಯಲ್ಲಿ ಕುಳಿತಿದ್ದ ಪತಿ, ಮಕ್ಕಳು ಪಾರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುನ್ನಾಖೇಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು