Wednesday, January 22, 2025
ಸಿನಿಮಾ

ಇಂತಹ ಸಿನಿಮಾಗಳನ್ನು ದೀಪಿಕಾ ಪಡುಕೋಣೆ ಒಪ್ಪಿಕೊಳ್ಳುವುದೇ ಇಲ್ಲವಂತೆ – ಕಹಳೆ ನ್ಯೂಸ್

ನಟಿ ದೀಪಿಕಾ ಪಡುಕೋಣೆ ಬಾಲಿವುಡ್ ನ ನಂಬರ್ ಒನ್ ನಟಿ ಆಗಿದ್ದಾರೆ. ತಮ್ಮ ಸಿನಿಮಾಗಳ ಆಯ್ಕೆ ಪ್ರಕ್ರಿಯೆ ಬಗ್ಗೆ ಇದೀಗ ದೀಪಿಕಾ ಮಾತನಾಡಿದ್ದು, ಒಂದು ಸಿನಿಮಾವನ್ನು ಹೇಗೆ ಆಯ್ಕೆ ಮಾಡುತ್ತಾರೆ ಎಂದು ತಿಳಿಸಿದ್ದಾರೆ.

ತನಗೆ ಚಾಲೆಂಜಿಂಗ್ ಎನ್ನಿಸುವ ಪಾತ್ರಗಳನ್ನು ಮಾತ್ರ ದೀಪಿಕಾ ಮಾಡುತ್ತಾರಂತೆ. ತಮ್ಮ ಕಂಫರ್ಟ್ ಜೋನ್ ನಿಂದ ಆಚೆ ಬಂದು ಪಾತ್ರಗಳನ್ನು ನಿರ್ವಹಿಸಬೇಕು ಎನ್ನುವುದು ದೀಪಿಕಾ ಆಸೆ. ತನಗೆ ಸವಾಲು ಎನಿಸದ ಪಾತ್ರವನ್ನು ಎಂದಿಗೂ ಮಾಡುವುದಿಲ್ಲ. ಅಂತಹ ಸಿನಿಮಾಗಳನ್ನು ಆಯ್ಕೆ ಮಾಡುವುದೇ ಇಲ್ಲ ಎಂದು ದೀಪಿಕಾ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಾಲಿವುಡ್ ನಲ್ಲಿ 12 ವರ್ಷ ಪೂರೈಸಿದ ಬೆಂಗಳೂರು ಗರ್ಲ್

ಜಾಹೀರಾತು
ಜಾಹೀರಾತು
ಜಾಹೀರಾತು

ಒಂದು ಸಿನಿಮಾದ ಕಥೆ ಕೇಳುವ ದೀಪಿಕಾ ತಮ್ಮ ಹೃದಯದಿಂದ ಅದನ್ನು ಆಯ್ಕೆ ಮಾಡುತ್ತಾರಂತೆ. ತಮಗೆ ಕಥೆ ನಿಜಕ್ಕೂ ಇಷ್ಟ ಆದರೆ, ಅಂತಹ ಸಿನಿಮಾಗಳನ್ನು ಮಾತ್ರ ಒಪ್ಪಿಕೊಳ್ಳುತ್ತಾರಂತೆ. ದೀಪಿಕಾರ ಈ ರೀತಿಯ ಆಯ್ಕೆ ಪ್ರಕ್ರಿಯೆ, ಸ್ಟಾರ್ ಆದ ಮೇಲೆ ಬದಲಾಗಿಲ್ಲ. ಕಳೆದ 10 ವರ್ಷಗಳಿಂದ ನಾನು ಇದನ್ನೇ ಪಾಲಿಸಿಕೊಂಡು ಬಂದಿದ್ದೇನೆ ಎಂದು ದೀಪಿಕಾ ತಿಳಿಸಿದ್ದಾರೆ.

‘ಬಾಜಿರಾವ್ ಮಸ್ತಾನಿ’, ‘ಪದ್ಮಾವತಿ’, ‘ಪಿಕು’ ಹೀಗೆ ಬೇರೆ ರೀತಿ ಪಾತ್ರಗಳನ್ನು ದೀಪಿಕಾ ಪ್ರಯತ್ನ ಮಾಡಿ ಯಶಸ್ವಿ ಆಗಿದ್ದಾರೆ. ಸದ್ಯ, ‘ಚಪಾಕ್’ ಸಿನಿಮಾದಲ್ಲಿ ದೀಪಿಕಾ ನಟಿಸುತ್ತಿದ್ದಾರೆ. ಆಸಿಡ್ ದಾಳಿಗೆ ಒಳಗಾಗಿದ್ದ ಲಕ್ಷ್ಮಿ ಅಗರ್ವಾಲ್ ಅವರ ಪಾತ್ರದಲ್ಲಿ ನಟಿಸಿದ್ದಾರೆ.

ಅತಿಯಾಗಿ ಮಸ್ತಿ ಮಾಡಿದ್ದೇ ದೀಪಿಕಾ ಆರೋಗ್ಯಕ್ಕೆ ಮುಳುವಾಯಿತು.!

ಇಂತಹ ಕಥೆಗೆ ನಿರ್ದೇಶಕಿ ಮೇಘನಾ ಗುಲ್ಜಾರ್ ಸಿನಿಮಾ ರೂಪ ನೀಡುತ್ತಿದ್ದಾರೆ. ಫಾಕ್ಸ್ ಸ್ಟಾರ್ ಸ್ಟುಡಿಯೊ ಜೊತೆಗೆ ಸೇರಿ ದೀಪಿಕಾ ಕೂಡ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. 2020ರ ಜನವರಿ 10 ರಂದು ‘ಚಪಾಕ್’ ಸಿನಿಮಾ ಬಿಡುಗಡೆಯಾಗಲಿದೆ.