Wednesday, November 13, 2024
ಸುದ್ದಿ

ಸತ್ಯ ಮೇವ ಜಯತೆ ; ಪ್ರೇಮಲತಾ ದಿವಾಕರ್ ದಂಪತಿ, ಚಾ.ಮೂ. ಕೃಷ್ಣ ಶಾಸ್ತ್ರೀ ವಿರುದ್ಧ ಪ್ರಕರಣ ದಾಖಲು – ಕಹಳೆ ನ್ಯೂಸ್

ಹೊನ್ನಾವರ : ಶ್ರೀರಾಮಚಂದ್ರಾಪುರಮಠ ಹಾಗೂ  ರಾಘವೇಶ್ವರ ಶ್ರೀಗಳ ವಿರುದ್ಧ ಮಾಡಲಾಗಿದ್ದ ಬ್ಲಾಕ್’ಮೈಲ್ ಪ್ರಕರಣಕ್ಕೆ ಸಂಬಂಧಿಸಿದಂತೆ  ಪ್ರೇಮಲತಾ ದಿವಾಕರ್ ದಂಪತಿ ಸೇರಿದಂತೆ 7 ಜನರ ವಿರುದ್ಧ ದೂರು ದಾಖಲಿಸಿ, ಸಮನ್ಸ್ ಜಾರಿಗೊಳಿಸುವಂತೆ ನ್ಯಾಯಾಲಯವು ಆದೇಶಿಸಿದೆ.

ಜನವರಿ 29ರಂದು ಸಿಐಡಿ ಸಲ್ಲಿಸಿದ್ದ ಬಿ’ರಿಪೋರ್ಟ್ ತಿರಸ್ಕರಿಸಿದ್ದ ನ್ಯಾಯಾಲಯ, ಇದೀಗ ಪ್ರೇಮಲತಾ , ದಿವಾಕರ್ ಶಾಸ್ತ್ರಿ, ಚ.ಮೂ ಕೃಷ್ಣಶಾಸ್ತ್ರಿ, ಸಿ.ಎಂ.ಎನ್ ಶಾಸ್ತ್ರಿ, ಗಂಗಾಧರ ಶಾಸ್ತ್ರಿ, ಸರಕಾರಿ ಅಭಿಯೋಜಕ ಬಿ.ಟಿ ವೆಂಕಟೇಶ್, ಬಿ ಪದ್ಮನಾಭ ಶರ್ಮ ಎಂಬುವರ ವಿರುದ್ಧ  IPC 384, 389, 504, 506, 511, 120(B) ಅನ್ವಯ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಆದೇಶಿಸಿರುವ ನ್ಯಾಯಾಲಯ, ಎಲ್ಲಾ ಏಳು ಆರೋಪಿಗಳಿಗೂ ಸಮನ್ಸ್ ಜಾರಿಗೊಳಿಸಿ ಮುಂದಿನ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.  ಶ್ರೀರಾಮಚಂದ್ರಾಪುರ ಮಠದ ಭಕ್ತರು ದಾಖಲಿಸಿದ್ದ ದೂರಿನನ್ವಯ ಸಿಐಡಿ ಸಲ್ಲಿಸಿದ್ದ ‘ಬಿ’ ರಿಪೋರ್ಟ್ ತಿರಸ್ಕರಿಸಿ ವಿಚಾರಣೆ ಆರಂಭಿಸಿರುವ ಹೊನ್ನಾವರದ ನ್ಯಾಯಾಲಯ ಪೂರಕ ದಾಖಲೆಗಳು ಲಭ್ಯವಾಗಿರುವುದರಿಂದ ಈ ಕ್ರಮ ಕೈಗೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಪಂಚನಾಮೆಯಲ್ಲಿ ತಪ್ಪೊಪ್ಪಿಕೊಂಡಿದ್ದರು:

ಜಾಹೀರಾತು
ಜಾಹೀರಾತು
ಜಾಹೀರಾತು

ಬ್ಲಾಕ್’ಮೈಲ್ ಕೇಸಿಗೆ ಸಂಬಂಧಿಸಿ ಬಂಧಿತರಾಗಿದ್ದ ಪ್ರೇಮಲತಾ ದಂಪತಿಗಳು, ಪಂಚನಾಮೆಯಲ್ಲಿ ತಾವು ರಾಮಚಂದ್ರಾಪುರಮಠವನ್ನು ಬ್ಲಾಕ್’ಮೇಲ್ ಮಾಡಿರುವುದಾಗಿ ಹಾಗೂ ಪೂಜ್ಯ ರಾಘವೇಶ್ವರ ಶ್ರೀಗಳ ವಿರುದ್ಧ ಸುಳ್ಳು ಅತ್ಯಾಚಾರ ಆರೋಪ ದಾಖಲಿಸುವ ಪ್ರಯತ್ನ ಮಾಡಿರುವುದಾಗಿ ಒಪ್ಪಿಕೊಂಡಿದ್ದರು. ಆದರೆ ಬಲವಾದ ಸಾಕ್ಷಗಳ ಹೊರತಾಗಿಯೂ ‘ಬಿ’ ರಿಪೋರ್ಟ್ ಸಲ್ಲಿಸಿ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿತ್ತು. ಇದೀಗ ನ್ಯಾಯಾಲಯ ವಿಚಾರಣೆ ಆರಂಭಿಸಿದ್ದು, ಆರೋಪಿಗಳಾದ ಪ್ರೇಮಲತಾ ದಂಪತಿ, ಚ ಮೂ ಕೃಷ್ಣಶಾಸ್ತ್ರಿ ಹಾಗೂ ಮತ್ತಿತರ ವಿರುದ್ಧ ಕ್ರಮಕ್ಕೆ ನ್ಯಾಯಾಲಯ ಮುಂದಾಗಿದೆ. ತನಿಖೆ ಸತ್ಯದ ಪರ ನಡೆಯುತ್ತಿದೆ ಎಂದು ಸಾರ್ವಜನಿಕರು ಹರ್ಷ ವ್ಯಕ್ತಡಿಸಿದ್ದಾರೆ.

ವರದಿ : ಕಹಳೆ ನ್ಯೂಸ್

Leave a Response