Breaking News : ಪುತ್ತೂರಿನ ಬೆಟ್ಟಂಪಾಡಿಯಲ್ಲಿ ಸ್ಪೋಟ ; ಒಬ್ಬನ ಸ್ಥಿತಿ ಗಂಭೀರ, ಹಲವರಿಗೆ ಗಾಯ – ಕಹಳೆ ನ್ಯೂಸ್
ಪುತ್ತೂರು: ತಾಲೂಕಿನ ಬೆಟ್ಟಂಪಾಡಿಯ ನಿವಾಸಿ ಕೇಪುಗೌಡ (85 ವರ್ಷ) ಎಂಬವರ ಪುತ್ರ ಬಾಲಕೃಷ್ಣ (54 ವರ್ಷ) ಎಂಬುವರ ಮನೆಯಲ್ಲಿ ಪಟಾಕಿಯಂತಹ ಸ್ಫೋಟಕ ವಸ್ತುವೊಂದು ಸಿಡಿದು ಒಬ್ಬ ಗಂಭೀರ ಗಾಯಗೊಂಡು 2 ಜನ ಸಣ್ಣಪುಟ್ಟ ಗಾಯಗೊಂಡ ಬಗ್ಗೆ ಡಿ.5 ರಂದು ವರದಿಯಾಗಿದೆ.
ತಮ್ಮ ಕೃಷಿಬೆಳೆಗಳಿಗೆ ಹಾನಿ ಮಾಡುವ ಕಾಡುಪ್ರಾಣಿಗಳನ್ನು ಕೊಲ್ಲಲು ಎಲ್ಲಿಂದಲೋ ಸ್ಪೋಟಕ ಸಾಮಾಗ್ರಿಗಳನ್ನು ತಂದು ತನ್ನ ಮನೆಯಲ್ಲೇ ಕಚ್ಚಾ ಸ್ಪೋಟಕವನ್ನು ತಯಾರಿಸಿಸುತ್ತಿದ್ದ ವೇಳೆ ಸ್ಪೋಟಕ ಸಿಡಿದಿದ್ದು ಪರಿಣಾಮವಾಗಿ ಬಾಲಕೃಷ್ಣರವರು ಗಂಭೀರವಾಗಿ ಗಾಯಗೊಂಡಿತ್ತಾರೆ ಹಾಗೂ ಬಾಲಕೃಷ್ಣರವರ ನಾದಿನಿ ವೇದಾವತಿ ಮತ್ತು ಅವರ ಮಕ್ಕಳಾದ ಕಾರ್ತಿಕ್ ಮತ್ತು ಮೋನಿಶಾ ಎಂಬವರುಗಳಿಗೆ ಸಣ್ಣಪುಟ್ಟ ಗಾಯಗಳಾಗಿರುತ್ತದೆ. ಸದರಿ ಬಾಲಕೃಷ್ಣರವರನ್ನು ಮಂಗಳೂರಿನ ಎ.ಜೆ.ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಉಳಿದವರನ್ನು ಪುತ್ತೂರಿನ ಹಿತ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ. ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಜಿಲ್ಲಾ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.
ಬಾಲಕೃಷ್ಣ ಗೌಡರು ದಕ್ಷಿಣ ಕನ್ನಡ, ಕಾಸರಗೋಡಿನ ಹಲವು ದೇವಸ್ಥಾನಗಳ ಬ್ರಹ್ಮಕಲಶ ಕಾರ್ಯಗಳಲ್ಲಿ ಅವಿರತವಾಗಿ ದುಡಿಯುವವರಾಗಿದ್ದು, ಹಲವು ದೇವಸ್ಥಾನಗಳಲ್ಲಿ ಸನ್ಮಾನವೂ ನಡೆದಿದೆ.