Recent Posts

Sunday, January 19, 2025
ಸುದ್ದಿ

ತೆಲಂಗಾಣ ಎನ್‌ಕೌಂಟರ್‌: ನನ್ನ ಮಗಳ ಆತ್ಮಕ್ಕೆ ಈಗ ಶಾಂತಿ ದೊರಕಿದೆ ಎಂದ ‘ಪಶುವೈದ್ಯೆ’ ತಂದೆ – ಕಹಳೆ ನ್ಯೂಸ್

ನ್ಯೂಸ್‌ಡೆಸ್ಕ್: ನವೆಂಬರ್ 27 ರಂದು ಹೈದರಾಬಾದ್ ಬಳಿ ಅತ್ಯಾಚಾರ ಮತ್ತು ಕೊಲೆಗೀಡಾದ ಪಶುವೈದ್ಯೆಯ ಆರೋಪಿಗಳನ್ನು ಎನ್‌ಕೌಂಟರ್‌ನಲ್ಲಿ ಫಿನಿಷ್‌ ಮಾಡಲಾಗಿದೆ. ಈ ನಡುವೆ ಆರೋಪಿಗಳು ಪೊಲೀಸರ ಗುಂಡಿಗೆ ಬಲಿಯಾಗಿರುವುದಕ್ಕೆ ವೈದ್ಯೆಯ ತಂದೆ ಆರೋಪಿಗಳನ್ನು ಹತ್ಯೆಗೈದ ನಂತರ ತನ್ನ ಮಗಳ ಆತ್ಮಕ್ಕೆ ಶಾಂತಿ ದೊರಕಿದೆ ಅಂತ ಹೇಳಿದ್ದಾರೆ.

ನನ್ನ ಮಗಳು ತೀರಿಕೊಂಡು 10 ದಿನಗಳು ಕಳೆದಿವೆ. ಇದಕ್ಕಾಗಿ ನಾನು ಪೊಲೀಸ್ ಮತ್ತು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ಮಗಳ ಆತ್ಮವು ಈಗ ಸಮಾಧಾನವಾಗಿರಬೇಕು ಅಂತ ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತೆಲಂಗಾಣದ ಹೈದರಾಬಾದ್‌ ಹೊರವಲಯದ ಶಂಶಾಬಾದ್‌ನಲ್ಲಿ 27 ವರ್ಷದ ಪಶುವೈದ್ಯೆಯ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಇಂದು ಮುಂಜಾನೆ 3:30 ರ ಸುಮಾರಿಗೆ ಹುಬ್ಬಳ್ಳಿ ಮೂಲದ ವಿಶ್ವನಾಥ್ ಸಜ್ಜನರ್ ನೇತೃತ್ವದ ಪೊಲೀಸ್ ಕಮಿಷನರ್ ತಂಡ ನಡೆಸಿದ ಎನ್‌ಕೌಂಟರ್‌ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ್ದಾರೆ. ಎನ್‌ಕೌಂಟರ್‌ನಲ್ಲಿ ಮಹಮ್ಮದ್‌ ಆರೀಫ್‌, ಜೊಲ್ಲು ಶಿವ, ಚನ್ನಕೇಶವಲು ಹಾಗೂ ಜೊಲ್ಲು ನವೀನ್‌ ಸ್ಥಳದಲ್ಲದಲ್ಲೇ ಸಾವನ್ನಪ್ಪಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು