Recent Posts

Sunday, January 19, 2025
ಸುದ್ದಿ

ಪಾಪಿಗಳಿಗೆ ದೇವರೇ ತಕ್ಕ ಶಾಸ್ತಿ ಮಾಡಿದ್ದಾನೆ: ಎನ್ಕೌಂಟರ್ ಕುರಿತು ಪ್ರಿಯಾಂಕಾ ಪೋಷಕರು

ಹೈದರಾಬಾದ್: ತಮ್ಮ ಮಗಳನ್ನು ಹರಿದು ಮುಕ್ಕಿದ ಪಾಪಿಗಳಗೇ ದೇವರೇ ತಕ್ಕ ಶಾಸ್ತಿ ಮಾಡಿದ್ದಾನೆ ಎಂದು ಹೈದರಾಬಾದ್ ಪಶು ವೈದ್ಯೆ ಪ್ರಿಯಾಂಕಾರೆಡ್ಡಿ ಪೋಷಕರು ಹೇಳಿದ್ದಾರೆ.

ಪ್ರಿಯಾಂಕಾರೆಡ್ಡಿ ಅತ್ಯಾಚಾರ ಆರೋಪಿಗಳ ಎನ್ ಕೌಂಟರ್ ಸುದ್ದಿ ಇದೀಗ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದು, ಪೊಲೀಸರ ಕಾರ್ಯಕ್ಕೆ ಎಲ್ಲಡೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ. ಇನ್ನು ಪೊಲೀಸರ ಕಾರ್ಯಕ್ಕೆ ಪ್ರಿಯಾಂಕಾ ರೆಡ್ಡಿ ಪೋಷಕರು ಕೂಡ ಹರ್ಷ ವ್ಯಕ್ತಪಡಿಸಿದ್ದು. ಈ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕಾರೆಡ್ಡಿ ತಾಯಿ, ತಮ್ಮ ಮಗಳನ್ನು ಹರಿದು ಮುಕ್ಕಿದ ಪಾಪಿಗಳಗೇ ದೇವರೇ ತಕ್ಕ ಶಾಸ್ತಿ ಮಾಡಿದ್ದಾನೆ. ಆ ದೇವರೇ ಪಾಪಿಗಳಿಗೆ ಶಿಕ್ಷೆ ನೀಡುವ ಮೂಲಕ ನನ್ನ ಮಗಳಿಗೆ ನ್ಯಾಯ ಕೊಡಿಸಿದ್ದಾನೆ ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಂತೆಯೇ ಪೊಲೀಸರ ಕಾರ್ಯವನ್ನು ಶ್ಲಾಘಿಸಿರುವ ನಿರ್ಭಯಾತಾಯಿ ಆಶಾದೇವಿ ಅವರು, ಪೊಲೀಸರ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು. ಎನ್ ಕೌಂಟರ್ ಮಾಡಿರುವ ಪೊಲೀಸರ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಳ್ಳದಂತೆ ಸರ್ಕಾರಕ್ಕೆ ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು