Recent Posts

Sunday, January 19, 2025
ಸುದ್ದಿ

DCP ಬಳಿಯಿದ್ದ ಗನ್ ಕಿತ್ತುಕೊಳ್ಳಲು ಯತ್ನಿಸಿದ್ದರು ಅತ್ಯಾಚಾರ ಆರೋಪಿಗಳು – ಕಹಳೆ ನ್ಯೂಸ್

ವೈದ್ಯ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಹೈದರಾಬಾದ್ ಪೊಲೀಸರು ಇಂದು ಬೆಳಿಗ್ಗೆ ನಡೆದ ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದ್ದಾರೆ. ಸ್ಥಳ ಪರಿಶೀಲನೆಗೆಂದು ಅತ್ಯಾಚಾರ ಹಾಗೂ ಹತ್ಯೆ ಕೃತ್ಯ ನಡೆದಿದ್ದ ಶಾದ್ ನಗರದ ಅಂಡರ್ ಬ್ರಿಡ್ಜ್ ಬಳಿ ಆರೋಪಿಗಳನ್ನು ಕರೆದುಕೊಂಡು ಹೋದ ವೇಳೆ ಪೊಲೀಸರತ್ತ ಕಲ್ಲು ತೂರಾಟ ನಡೆಸಿ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದರೆಂದು ಹೇಳಲಾಗಿತ್ತು.

ಆದರೆ ಇದೀಗ ಬಹಿರಂಗಗೊಂಡಿರುವ ಮಾಹಿತಿ ಪ್ರಕಾರ ಆರೋಪಿಗಳಾದ ಆರೀಫ್, ಜೊಲ್ಲು ಶಿವ, ಚನ್ನಕೇಶವಲು ಹಾಗೂ ನವೀನ್ ಅವರುಗಳನ್ನು 3-30 ಕ್ಕೆ ಕರೆದುಕೊಂಡು ಹೋದ ವೇಳೆ ಕತ್ತಲೆಯ ಲಾಭ ಪಡೆದು ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಅಲ್ಲದೆ ಡಿಸಿಪಿ ಒಬ್ಬರಿಂದ ಗನ್ ಕಸಿದುಕೊಳ್ಳಲು ಇವರುಗಳು ಯತ್ನಿಸಿದ್ದು, ಈ ಸಂದರ್ಭದಲ್ಲಿ ಸ್ವಯಂ ರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ. ಇದರ ಪರಿಣಾಮವಾಗಿ ನಾಲ್ವರೂ ಆರೋಪಿಗಳು ಸ್ಥಳದಲ್ಲೇ ಹೆಣವಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅತ್ಯಾಚಾರ ಆರೋಪಿಗಳಿಗೆ ಈ ಮೂಲಕ ತಕ್ಕ ಶಾಸ್ತಿಯಾಯಿತೆಂಬ ಸಂಭ್ರಮ ಈಗ ದೇಶದ ಜನತೆಯಲ್ಲಿ ಮನೆಮಾಡಿದ್ದು, ಪೊಲೀಸರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ. ಯಾವ ಜಾಗದಲ್ಲಿ ಹೀನ ಕೃತ್ಯ ಎಸಗಿದ್ದರೋ ಅದೇ ಜಾಗದಲ್ಲಿ ನಾಲ್ವರು ಆರೋಪಿಗಳು ಈಗ ಮಣ್ಣು ಪಾಲಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು