Recent Posts

Monday, January 20, 2025
ಸುದ್ದಿ

ಅತ್ಯಾಚಾರ ಆರೋಪಿಗಳ ʼಎನ್‌ ಕೌಂಟರ್‌ʼ ಗೆ ಬಿಜೆಪಿ ಸಂಸದೆ ವಿರೋಧ-ಕಹಳೆ ನ್ಯೂಸ್

ವೈದ್ಯೆ ಮೇಲೆ ಅತ್ಯಾಚಾರವೆಸಗಿ ಅವರನ್ನು ಬರ್ಬರವಾಗಿ ಹತ್ಯೆಗೈದಿದ್ದ ನಾಲ್ವರು ಆರೋಪಿಗಳನ್ನು ಹೈದರಾಬಾದ್‌ ಪೊಲೀಸರು ಇಂದು ಬೆಳಗಿನ ಜಾವ ನಡೆಸಿದ ಎನ್‌ ಕೌಂಟರ್‌ ನಲ್ಲಿ ಹತ್ಯೆಗೈದಿದ್ದಾರೆ.

ಪೈಶಾಚಿಕ ಕೃತ್ಯವೆಸಗಿದ್ದ ಆರೋಪಿಗಳ ಎನ್‌ ಕೌಂಟರ್‌ ಮಾಡಿರುವ ಪೊಲೀಸರ ಕಾರ್ಯಕ್ಕೆ ದೇಶದಾದ್ಯಂತ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಆರೋಪಿಗಳಿಗೆ ತಕ್ಕ ಶಾಸ್ತಿ ಮಾಡಲಾಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದರ ಮಧ್ಯೆ ಮಾಜಿ ಕೇಂದ್ರ ಸಚಿವೆ, ಬಿಜೆಪಿ ಸಂಸದೆ ಮೇನಕಾ ಗಾಂಧಿ ಪೊಲೀಸರು ನಡೆಸಿರುವ ಎನ್‌ ಕೌಂಟರ್‌ ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎನ್‌ ಕೌಂಟರ್‌ ಮಾಡಿದ ಕ್ರಮವನ್ನು ನಾನು ಒಪ್ಪುವುದಿಲ್ಲ. ಆರೋಪಿಗಳನ್ನು ಕಾನೂನಿನ ಕುಣಿಕೆಗೆ ಒಪ್ಪಿಸಬೇಕಾಗಿತ್ತು ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು