ನವದೆಹಲಿ : ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳ ಎನ್‍ಕೌಂಟರ್‌ಗೆ ಪ್ರಶಂಸೆ ಮೂಡುತ್ತಿರುವ ಬೆನ್ನಲ್ಲೇ ಮಾನವಹಕ್ಕುಗಳ ಸಂಸ್ಥೆ ‘ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್’ (ಪಿಯುಸಿಎಲ್ ಇದೊಂದು ಯೋಜಿತ ಹತ್ಯೆ ಎಂದು ಹೇಳಿ ನಾಲ್ಕು ಪ್ರಶ್ನೆಗಳನ್ನು ಮುಂದುಟ್ಟಿದ್ದಾರೆ.ಹಾಗೆಯೇ ಎನ್‍ಕೌಂಟರ್ ನಡೆಸಿದ ಪೊಲೀಸರ ವಿರುದ್ಧ ಎಫ್‍ಐಆರ್ ದಾಖಲು ಮಾಡಬೇಕು ಎಂಬ ಬೇಡಿಕೆ ಮಾಡಿದ್ದು ನ್ಯಾಯಾಂಗ ತನಿಖೆಗೆ ಆಗ್ರಹ ಮಾಡಿದ್ದಾರೆ.
ಒಂದನೆಯದಾಗಿ “ಸ್ಥಳದ ಮಹಜರುವನ್ನು ಬೆಳಗಿನ ಜಾವ ೩ ಗಂಟೆ ಸಮಯದಲ್ಲಿ, 50ಕ್ಕೂ ಹೆಚ್ಚು ತೆಲಂಗಾಣ ಪೊಲೀಸ್‌ರ ನೇತೃತ್ವದಲ್ಲಿ ಯಾಕೆ ನಡೆಸಬೇಕು?”
ಎರಡನೆಯದಾಗಿ “ಆರೋಪಿಗಳನ್ನು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದ್ದು ಆರೋಪಿಗಳು ಯಾವುದೇ ಶಸ್ತ್ರಗಳನ್ನು ಹೊಂದಿರಲಿಲ್ಲ. ಅದಲ್ಲದೇ ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕರೆತರುವಾಗ ಕೈಗೆ ಕೊಳ ಹಾಕಿ, ಮುಖವನ್ನು ಮುಚ್ಚಲಾಗಿತ್ತು. ಕ್ರೈಂ ನಡೆದ ಸ್ಥಳಕ್ಕೆ ಕರೆದುಕೊಂಡು ಹೋಗಲು ಆ ಒಂದು ಹಾದಿಯನ್ನು ಹೊರತುಪಡಿಸಿ ಬೇರೆ ಹಾದಿಯೇ ಇಲ್ಲ. ಹಾಗಿದ್ದರು ಅವರು ಪೊಲೀಸರಿಂದ ತಪ್ಪಿಸಿಕೊಂಡು ಹೇಗೆ ಅಷ್ಟು ದೂರ ಹೋಗಲು ಸಾಧ್ಯ?”
ಮೂರನೆಯದಾಗಿ “ಆರೋಪಿಗಳ ಮೇಲರ ಗುಂಡು ಹಾರಿಸಲು ಅವರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರಾ? ಹಾಗಿರುವಾಗ ಅವರ ಮೇಲೆ ಎನ್‌ಕೌಂಟರ್ ನಡೆಸಲು ಕಾರಣವಾದರೂ ಏನು?”
ನಾಲ್ಕನೆಯದಾಗಿ “ಆರೋಪಿಗಳು ಯಾವುದೇ ಶಸ್ತ್ರ ಹೊಂದಿರಲಿಲ್ಲ. ಪೊಲೀಸರಿಗೆ ಶೂಟ್ ಮಾಡುವ ಅನಿವಾರ್ಯ ಪರಿಸ್ಥಿತಿ ಇದ್ದರೂ ಕೂಡಾ ಆರೋಪಿಗಳ ಮೊಣಕಾಲಿನ ಕೆಳಭಾಗಕ್ಕೆ ಶೂಟ್ ಮಾಡಬಹುದಿತ್ತು. ಆದರೆ ಆರೋಪಿಗಳ ದೇಹದ ಪ್ರಮುಖ ಅಂಗಾಂಗಳಿಗೆ ಪೊಲೀಸರು ಶೂಟ್ ಮಾಡಿದ್ದು ಯಾಕೆ?”
ಪೊಲೀಸರ ವಶದಲ್ಲಿರುವ ಆರೋಪಿಗಳು ಅವರ ಕೈಯಲ್ಲೇ ಸುರಕ್ಷಿತವಲ್ಲದಿದ್ದರೆ, ಅಕ್ರಮವಾಗಿ ಬಂಧಿಸಿರವರನ್ನು ಬಿಡುಗಡೆ ಮಾಡಿ. ಪೊಲೀಸರನ್ನು ವೈಭವೀಕರಣ ಮಾಡುವುದನ್ನು ನಿಲ್ಲಿಸಿ. ಪೊಲೀಸರು ಯೋಜಿತ ಹತ್ಯೆ ನಡೆಸಿದ್ದಾರೆ ಎಂದು ಈ ಸಂಸ್ಥೆ ದೂರಿದೆ.