ಪುತ್ತೂರು: ಎಬಿವಿಪಿ ವಿವೇಕಾನಂದ ಕಾನೂನು ಮಹಾವಿದ್ಯಾಲಯ ಘಟಕದಿಂದ ಡಾ. ಬಿ. ಆರ್. ಅಂಬೇಡ್ಕರ್ ರವರ 63ನೇ ಪುಣ್ಯಸ್ಮರಣೆ- ಕಹಳೆ ನ್ಯೂಸ್
ಸಂವಿಧಾನ ಶಿಲ್ಪಿ, ಭಾರತದ ಮೊದಲ ಕಾನೂನು ಸಚಿವ ಡಾ// ಭೀಮರಾವ್ ರಾಮ್ ಜಿ ಅಂಬೇಡ್ಕರ್ ಅವರ 63ನೇ ಪುಣ್ಯಸ್ಮರಣೆಯ ಪ್ರಯುಕ್ತ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ABVP ಘಟಕದ ವತಿಯಿಂದ ಸಾಮಾಜಿಕ ಸಾಮರಸ್ಯ ದಿವಸ್ ಅನ್ನು ಕಾಲೇಜು ಸಭಾಂಗಣದಲ್ಲಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಕಾರ್ಯಕರ್ತರು ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಅವರಿಗೆ ಗೌರವವನ್ನು ಸಲ್ಲಿಸಿದರು.
ನಂತರ ಅತಿಥಿಯಾಗಿ ಆಗಮಿಸಿದ ಉಪನ್ಯಾಸಕ ಶ್ರೀ ಕುಮಾರ್ ಶೇಣಿಯವರು ಅಂಬೇಡ್ಕರ್ ರವರ ಸಾಧನೆಗಳು, ಅಂಬೇಡ್ಕರ್ ರವರು ರಚಿಸಿರುವ ಸಂವಿಧಾನದ ಕುರಿತು,ಅವರ ವಿಚಾರಧಾರೆಯ ಕುರಿತು ಮಾತನಾಡಿದರು. ಅಂಬೇಡ್ಕರ್ ರವರ ಅಧ್ಯಯನ ಪ್ರವೃತ್ತಿ ನಮಗೆಲ್ಲ ಮಾದರಿಯಾಗಬೇಕೆಂದು ತಿಳಿಸಿದರು. ಕಾಲೇಜು ಘಟಕದ ABVP ನಾಯಕರುಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.