ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಎಂಬ ಕಾರಣಕ್ಕೆ ಪತಿ ಕೊಲೆ ಮಾಡಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರನಿಗೆ ಚಿಕ್ಕಮಗಳೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ವಿನಯ್ ಗೌಡ ಮತ್ತು ಸುಜಾತಾ ಶಿಕ್ಷೆಗೆ ಒಳಗಾದವರು. ಎನ್‌ಆರ್ ಪುರ ಸಮೀಪದ ಹರವರಿ ದೊಡ್ಡಹಡ್ಲು ಗ್ರಾಮದ ಯೋಗೇಂದ್ರ ಅವರನ್ನು 2016 ರ ನವೆಂಬರ್ 3ರಂದು ಕೊಲೆ ಮಾಡಲಾಗಿತ್ತು.
ಯೋಗೇಂದ್ರನ ಪತ್ನಿ ಸುಜಾತಾ ಮತ್ತು ವಿನಯ್ ಗೌಡನ ನಡುವೆ ಅನೈತಿಕ ಸಂಬಂಧ ಬೆಳೆದಿದ್ದು, ಇಬ್ಬರು ಮದುವೆಯಾಗಲು ಇಚ್ಚಿಸಿದ್ದರು. ತಮ್ಮ ಅಕ್ರಮ ಸಂಬಂಧಕ್ಕೆ ಯೋಗೇಂದ್ರ ಅಡ್ಡಿಯಾಗಬಹುದು ಎಂದು ಆತನನ್ನು ಕೊಲೆ ಮಾಡಿದ್ದರೆನ್ನಲಾಗಿದೆ.
ಪ್ರಕರಣ ದಾಖಲಿಸಿಕೊಂಡ ಎನ್‌ಆರ್ ಪುರ ಠಾಣೆ ಪೊಲೀಸರು ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶ ಉಮೇಶ್ ಎಂ. ಅಡಿಗ ಮಾಡಿದ ವಿಚಾರಣೆ ನಡೆಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ವಿ.ಜಿ. ಯಳಗೇರಿ ವಾದ ಮಂಡಿಸಿದ್ದಾರೆ.