Monday, November 25, 2024
ಸುದ್ದಿ

ಗರ್ಭಿಣಿ ಪತ್ನಿಗೆ ಮೋಸ ಮಾಡಿದ ಪತಿ ಹೇಳಿದ ಕಾರಣವೇನು ಗೊತ್ತಾ – ಕಹಳೆ ನ್ಯೂಸ್

ಪೋರ್ಟಲ್ ಒಂದರಲ್ಲಿ ವ್ಯಕ್ತಿಯೊಬ್ಬ ತನ್ನ ಜೀವನದಲ್ಲಿ ನಡೆಯುತ್ತಿರುವ ಘಟನೆಯನ್ನು ಹೇಳಿಕೊಂಡಿದ್ದಾನೆ. ಜೊತೆಗೆ ಸಮಸ್ಯೆಗೆ ಪರಿಹಾರ ಕೇಳಿದ್ದಾನೆ. ವ್ಯಕ್ತಿಗೆ ಈಗ 29 ವರ್ಷವಂತೆ. ಆತನ ಪತ್ನಿಗೆ 28 ವರ್ಷ.

ಮದುವೆಗೂ ಮುನ್ನ ನಾಲ್ಕು ವರ್ಷ ಇಬ್ಬರು ಪ್ರೀತಿಯಲ್ಲಿದ್ದರಂತೆ. ಸಂಗಾತಿ ಜೊತೆ ಇಡೀ ಜೀವನ ಕಳೆಯುವ ಆಸೆ ಹೊಂದಿದ್ದ ಕಾರಣ ವ್ಯಕ್ತಿ ಮದುವೆ ನಿರ್ಣಯ ತೆಗೆದುಕೊಂಡಿದ್ದನಂತೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮದುವೆಯಾದ ನಾಲ್ಕು ವಾರದ ನಂತ್ರ ಪತ್ನಿ ಆಘಾತಕಾರಿ ಸಂಗತಿ ಹೇಳಿದ್ದಳಂತೆ. ಇಬ್ಬರ ಮಧ್ಯೆ ಪ್ರೀತಿ ಚಿಗುರುವ ಮೊದಲು ಇನ್ನೊಬ್ಬನನ್ನು ಪ್ರೀತಿ ಮಾಡಿದ್ದೆ ಎಂದು ಪತ್ನಿ ಹೇಳಿದ್ದಳಂತೆ. ಇದು ಸಹಜವೆಂದುಕೊಂಡಿದ್ದನಂತೆ ಪತಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಆದ್ರೆ ಪತ್ನಿ ಹೇಳಿದ ಇನ್ನೊಂದು ಮಾತು ಆತನಿಗೆ ಶಾಕ್ ಆಗಿದೆಯಂತೆ. ಪತ್ನಿ ಮತ್ತಾರನ್ನೂ ಅಲ್ಲ ಆತನ ಸ್ನೇಹಿತನನ್ನು ಪ್ರೀತಿಸಿದ್ದಳಂತೆ. ಮದುವೆಯಾದ್ಮೇಲೆ ಇಬ್ಬರನ್ನೂ ಪತಿ ಭೇಟಿ ಮಾಡಿಸಿದ್ದನಂತೆ. ಆಗ ಅಪರಿಚಿತರಂತೆ ಇಬ್ಬರು ನಡೆದುಕೊಂಡಿದ್ದರಂತೆ.

ಪತ್ನಿ ಮದುವೆಗೂ ಮುನ್ನ ಈ ವಿಷ್ಯ ಹೇಳಿದ್ದರೆ ನಾನು ಕ್ಷಮಿಸುತ್ತಿದ್ದೆ ಎನ್ನುತ್ತಾನೆ ಈ ವ್ಯಕ್ತಿ. ಇಷ್ಟರ ಮಧ್ಯೆ ಪಬ್ ಗೆ ಹೋಗಿದ್ದ ವೇಳೆ ಯುವತಿಯೊಬ್ಬಳ ಪರಿಚಯವಾಗಿತ್ತಂತೆ.

ಆಕೆ ಮುಂದೆ ಎಲ್ಲವನ್ನೂ ಹೇಳಿಕೊಂಡಿದ್ದನಂತೆ. ನಂತ್ರ ಇಬ್ಬರೂ ಪ್ರೀತಿಗೆ ಬಿದ್ದಿದ್ದಾರಂತೆ. ಪತ್ನಿ ಗರ್ಭಿಣಿ ಎಂಬ ಸಂಗತಿ ಕೂಡ ಆಕೆಗೆ ತಿಳಿದಿದೆಯಂತೆ. ಪತ್ನಿ ಮೇಲೆ ಸ್ವಲ್ಪವೂ ಪ್ರೀತಿಯಿಲ್ಲ.

ಮುಂದೇನು ಮಾಡಲಿ ಎಂದು ಪ್ರಶ್ನೆ ಕೇಳಿದ್ದಾನೆ. ಆತನಿಗೆ ಅನೇಕರು ಅನೇಕ ರೀತಿ ಉತ್ತರ ನೀಡಿದ್ದಾರೆ.