Monday, January 20, 2025
ಸುದ್ದಿ

ಉಪ್ಪಿನಂಗಡಿ: ಬೃಹತ್ ಕಂಟೇನರ್ ನಲ್ಲಿ ಅಕ್ರಮ ಗೋ ಸಾಗಾಟ ಪತ್ತೆ : 800 ಕೆಜಿ ಮಾಂಸ ವಶಕ್ಕೆ, ಓರ್ವನ ಬಂಧನ–ಕಹಳೆ ನ್ಯೂಸ್

ಉಪ್ಪಿನಂಗಡಿ:ಅಕ್ರಮವಾಗಿ ಗೋವನ್ನು ವಧಿಸಿ ಕಂಟೈನರ್ ನಲ್ಲಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಉಪ್ಪಿನಂಗಡಿ ಪೊಲೀಸರು ಓರ್ವನನ್ನು ಬಂಧಿಸಿ, ಕಂಟೈನರ್ ಸಹಿತ 800 ಕೆಜಿ ಗೋ ಮಾಂಸವನ್ನು ವಶಪಡಿಸಿಕೊಂಡ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.ಖಚಿತ ಮಾಹಿತಿಯ ಮೇರೆಗೆ ಶಿರಾಡಿ ಗ್ರಾಮದ ಗುಂಡ್ಯ ಬಳಿ ಉಪ್ಪಿನಂಗಡಿ ಪೊಲೀಸರು ತಪಾಸಣೆ ನಿರತರಾಗಿದ್ದ ವೇಳೆ ಕಂಟೈನರ್ ಲಾರಿಯೊಂದರಲ್ಲಿ ಯಾರಿಗೂ ಅನುಮಾನ ಬಾರದಂತೆ ಭಾರೀ ಪ್ರಮಾಣದ ದನದ ಮಾಂಸ ಸಾಗಾಟ ಮಾಡಲಾಗುತ್ತಿರುವುದು ಕಂಡು ಬಂದಿದೆ. ಕಂಟೈನರ್ ಚಾಲಕ ಬಂದಾರ್ ನಿವಾಸಿ ರಿಝ್ವಾನ್ ಎಂಬಾತನನ್ನು ಬಂಧಿಸಿ ವಿಚಾರಿಸಿದಾಗ, ಚೆನ್ನರಾಯಪಟ್ಟಣದಿಂದ ಗೋಮಾಂಸವನ್ನು ಅಕ್ರಮವಾಗಿ ಯಾರಿಗೂ ಸಂಶಯ ಬಾರದಂತೆ ಟಾರ್ಪಾಲಿನಲ್ಲಿ ಮುಚ್ಚಿ ಕಂಟೈನರ್ ನಲ್ಲಿ ತುಂಬಿಸಿ ಮಂಗಳೂರಿನ ಝುಲ್ಫಿಕರ್ ಎಂಬಾತನಿಗೆ ತಲುಪಿಸುತ್ತಿರುವುದಾಗಿ ತಿಳಿಸಿರುತ್ತಾನೆ. ಪ್ರಕರಣಕ್ಕೆ ಸಂಬಂಧಿಸಿ 2 ಲಕ್ಷ ರೂ. ಮೌಲ್ಯದ ದನದ ಮಾಂಸವನ್ನು ಹಾಗೂ 10 ಲಕ್ಷ ರೂ. ಮೌಲ್ಯದ ವಾಹನವನ್ನು ಮುಟ್ಟುಗೋಲು ಹಾಕಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು