ಬೆಂಗಳೂರು, ಡಿಸೆಂಬರ್ 9: ಇತ್ತೀಚಿನ ವರ್ಷಗಳಲ್ಲಿ ಚೀನಾ ತನ್ನ ಅಕ್ಕಪಕ್ಕದ ದೇಶಗಳ ಗಡಿಯಲ್ಲಿ ಭಾರೀ ಭದ್ರತೆಯನ್ನು ಹೆಚ್ಚಳ ಮಾಡಿರುವುದರಿಂದ ಭಾರತದ ಎಮ್ಮೆ ಮಾಂಸ ರಪ್ತು ಉದ್ಯಮ ಸಂಕಷ್ಟದಲ್ಲಿ ಸಿಲುಕಿಕೊಂಡಿದೆ.
ಹೌದು, ಮೂಲತಃ ಚೀನಿಯರು ಹಂದಿ ಮಾಂಸ ಪ್ರಿಯರು. ಆದರೆ, ಹಂದಿ ಜ್ವರ ಹೆಚ್ಚಳವಾದ ನಂತರ ಚೀನಾ ಸರ್ಕಾರ ಹಂದಿಗಳ ಸಾಕಾಣಿಕೆ ಬಗ್ಗೆ ಬಿಗಿ ಕ್ರಮಗಳನ್ನಿ ಕೈಗೊಂಡಿತು. ಹೀಗಾಗಿ ಪರ್ಯಾಯವಾಗಿ ಚೀನಿಯರು ಎಮ್ಮೆ ಮಾಂಸಕ್ಕೆ ಅಂಟಿಕೊಂಡಿದ್ದರು. ವಿಯೆಟ್ನಾಂ ಸೇರಿದಂತೆ ಅನೇಕ ಚೀನಾದ ನೆರೆಹೊರೆಯ ರಾಷ್ಟ್ರಗಳಿಗೆ ಭಾರದತದಿಂದ ಎಮ್ಮೆ ಮಾಂಸ ರಪ್ತಾಗುತ್ತದೆ. ಆದರೆ, ಚೀನಾ ತನ್ನ ಗಡಿಯಲ್ಲಿ ಮಾಂಸ ರಪ್ತಿನ ಮೇಕೆ ಬಿಗಿ ಕ್ರಮಗಳನ್ನು ಕೈಗೊಂಡಿರುವುದರಿಂದ ಚೀನಾದ ಒಳಗೆ ಎಮ್ಮೆ ಮಾಂಸ ಹೋಗುವುದು ಕಷ್ಟವಾಗಿದೆ.
ಹೆಚ್ಚಿನ ರಪ್ತು
ಚೀನಾದಿಂದ ಏಕೆ ಈ ನಿರ್ಧಾರ?ವಿಯೆಟ್ನಾಂ, ಇಂಡೋನೇಶಿಯಾ, ಮಲೇಷಿಯಾ, ಮಯನ್ಮಾರ್, ಥಾಯಲ್ಯಾಂಡ್ ಸೇರಿದಂತೆ ಅನೇಕ ದಕ್ಷಿಣ ಏಷ್ಯಾ ರಾಷ್ಟ್ರಗಳಿಗೆ ಭಾರತ ಭಾರೀ ಪ್ರಮಾಣದಲ್ಲಿ ಎಮ್ಮೆ ಮಾಂಸ ರಪ್ತು ಮಾಡುತ್ತದೆ. ಅಲ್ಲಿಂದ ವಿಯೆಟ್ನಾಂ, ಇಂಡೋನೇಶಿಯಾಗಳು ಚೀನಾಕ್ಕೆ ಎಮ್ಮೆ ಮಾಂಸವನ್ನು ಹೆಚ್ಚಿನ ಪ್ರಮಾಣದಲ್ಲಿ ರಪ್ತು ಮಾಡುತ್ತವೆ. ಇತ್ತೀಚೆಗೆ ಚೀನಾದಲ್ಲಿ ಮಾರಕವಾದಂತಹ ಆಪ್ರೀನಕ್ ಸ್ವಿನ್ ಪ್ಲೂ ಕಾಣಿಸಿಕೊಂಡಿದೆ. ಹೀಗಾಗಿ ಚೀನಾ ಆಮದು ಮಾಡಿಕೊಳ್ಳುವ ಎಮ್ಮೆ ಮಾಂಸದ ಮೇಲೆ ನಿಯಂತ್ರಣ ಹೇರಿದೆ.
ನೇರವಾಗಿ ಏಕೆ ಕಳಿಸುವುದಿಲ್ಲ?
ಚೀನಾಕ್ಕೆ ನೇರ ರಪ್ತು ಇಲ್ಲ!
ಇತ್ತೀಚಿನ ವರ್ಷಗಳಲ್ಲಿ ಗಡಿಯ ಮುಖಾಂತರ ಭದ್ರತಾ ವ್ಯವಸ್ಥೆ ಕಣ್ಣು ತಪ್ಪಿಸಿ, ವಿಯೆಟ್ನಾಂ ಹಾಗೂ ಇಂಡೋನೇಶಿಯಾದ ಸ್ಮಗ್ಲರ್ ಗಳು ಎಮ್ಮೆ ಮಾಂಸವನ್ನು ಅಕ್ರಮವಾಗಿ ರಪ್ತು ಮಾಡುತ್ತಿದ್ದವು. ಭಾರತ 2001 ರ ಬಿಜಿಂಗ್ ಒಪ್ಪಂದದ ಪ್ರಕಾರ ಎಮ್ಮೆ ಅಥವಾ ಯಾವುದೇ ದನದ ಮಾಂಸವನ್ನು ಚೀನಾಕ್ಕೆ ನೇರವಾಗಿ ರಪ್ತು ಮಾಡುವಂತಿಲ್ಲ. ಇದರಿಂದ ಈಗ ಎಮ್ಮೆ ಮಾಂಸ ರಪ್ತು ಉದ್ಯಮಕ್ಕೆ ಸಂಕಷ್ಟ ಬಂದೊದಗಿದೆ.
ಭಾರತದ ಎಮ್ಮೆ ಮಾಂಸ ರಪ್ತು ಉದ್ಯಮಕ್ಕೆ ಹೊಡೆತ
2 ಬಿಲಿಯನ್ ಡಾಲರ್ ವಹಿವಾಟು ಕುಸಿತ!
ಚೀನಾದ ಕಠಿಣ ನಿರ್ಧಾರಗಳ ನಂತರ ಭಾರತದ ಎಮ್ಮೆ ಮಾಂಸದ ವಾರ್ಷಿಕ 2 ಬಿಲಿಯನ್ ಡಾಲರ್ ವಹಿವಾಟು ಸಂಕಷ್ಟಕ್ಕೆ ಸಿಲುಕಿಕೊಂಡಿದೆ ಎಂದು ಬಿಜಿನಸ್ ಸ್ಟ್ಯಾಂಡರ್ಡ್ ವರದಿ ಮಾಡಿದೆ. 2014 ರಲ್ಲಿ 2 ಮಿಲಿಯನ್ ಟನ್ ಎಮ್ಮೆ ಮಾಂಸ ಭಾರತದಿಂದ ರಪ್ತಾಗಿತ್ತು. ಆದರೆ, 2019 ರಲ್ಲಿ 1.40 ಮಿಲಿಯನ್ ಟನ್ ಗೆ ಇಳದಿದೆ. ಈಗ ಚೀನಾ ಮತ್ತೆ ಕಠಿಣ ನಿರ್ಧಾರ ಕೈಗೊಂಡಿರುವುದರಿಂದ ರಪ್ತು ಪ್ರಮಾಣದಲ್ಲಿ ಮತ್ತಷ್ಟು ಇಳಿಕೆ ಕಾಣುವ ಸಂಭವವಿದೆ ಎಂದು ಅಂದಾಜಿಸಲಾಗಿದೆ.
ಮಾಂಸ ರಪ್ತು ಸಂಘಟನೆ ಒತ್ತಾಯ
ಇಂಡೋನೇಶಿಯಾ ಮೇಲೆ ಅವಲಂಬಿತ
ಕುಸಿಯುತ್ತಿರುವ ಎಮ್ಮೆ ಮಾಂಸ ರಪ್ತು ವಹಿವಾಟನ್ನು ಸರಿದೂಗಿಸುವಲ್ಲಿ ಭಾರತ ಇಂಡೋನೇಶಿಯಾದ ಮೇಲೆ ಅವಲಂಬಿತವಾಗಬೇಕಿದೆ ಎಂದು ಭಾರತೀಯ ಮಾಂಸ ರಪ್ತು ಸಂಘಟನೆಯ ಉಪಾಧ್ಯಕ್ಷ ಪಾವಜಾನ್ ಅಲ್ವಿ ಹೇಳಿದ್ದಾರೆ. 80 ಸಾವಿರ ಟನ್ ನಿಂದ 3 ಲಕ್ಷ ಟನ್ ಗೆ ಅದನ್ನು ಹೆಚ್ಚಿಸಬೇಕಿದೆ. ಇದಕ್ಕೆ ಭಾರತ ಹಾಗೂ ಇಂಡೋನೇಶಿಯಾ ಸರ್ಕಾರಗಳು ಮಾತುಕತೆ ನಡೆಸಬೇಕಿದೆ. ಅದಕ್ಕೆ ಇರುವ ಹೆಚ್ಚು ರಪ್ತು ಸುಂಕವನ್ನು ಕಡಿಮೆಗೊಳಿಸಬೇಕಿದೆ ಎಂದು ಅಲ್ವಿ ಹೇಳಿದ್ದಾರೆ.