Recent Posts

Monday, January 20, 2025
ಸುದ್ದಿ

ದಕ್ಷಿಣ ಆಫ್ರಿಕಾದ ಜೊಜಿಬಿನಿ ತುಂಜಿಗೆ ‘2019 ರ ಮಿಸ್ ಯೂನಿವರ್ಸ್’ ಪಟ್ಟ – ಕಹಳೆ ನ್ಯೂಸ್

ಅಟ್ಲಾಂಟಾ: ದಕ್ಷಿಣ ಆಫ್ರಿಕಾದ ಜೊಜಿಬಿನಿ ತುಂಜಿ 2019ನೇ ಸಾಲಿನ ಮಿಸ್ ಯೂನಿವರ್ಸ್ ಆಗಿ ಆಯ್ಕೆಯಾಗಿದ್ದಾರೆ. ಜಗತ್ತಿನ 90 ಸ್ಪರ್ಧಿಗಳನ್ನು ಸೋಲಿಸಿ ವಿಶ್ವ ಸುಂದರಿ ಕಿರೀಟ ತೊಟ್ಟುಕೊಂಡಿದ್ದಾರೆ.

ಅಮೆರಿಕಾದ ಜಾರ್ಜಿಯಾ ಸ್ಟೇಟ್ ರಾಜಧಾನಿ ಅಟ್ಲಾಂಟಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಮೆರಿಕಾದ ಖ್ಯಾತ ಹಾಸ್ಯನಟ ಮತ್ತು ನಿರೂಪಕ ಸ್ಟೀವ್ ಹರ್ವೆ ಕಳೆದ ರಾತ್ರಿ ನಡೆಸಿಕೊಟ್ಟ ಸಮಾರಂಭದಲ್ಲಿ 26 ವರ್ಷದ ತುಂಜಿ ಅವರನ್ನು ಮಿಸ್ ಯೂನಿವರ್ಸ್ ಎಂದು ಘೋಷಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಾರಿಯ ಮಿಸ್ ಯೂನಿವರ್ಸ್ ಸ್ಪರ್ಧೆಗೆ ಭಾರತದಿಂದ ವರ್ತಿಕಾ ಸಿಂಗ್ ಆಯ್ಕೆಯಾಗಿದ್ದರು. ಕೊನೆ ಸುತ್ತಿನಲ್ಲಿ ಟಾಪ್ 20 ಸ್ಪರ್ಧಿಗಳ ಸಾಲಿನಲ್ಲಿ ಸ್ಥಾನ ಪಡೆದು ನಿರ್ಗಮಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಿಸ್ ಪೋರ್ಟೊರಿಕೊ ಮ್ಯಾಡಿಸನ್ ಆಂಡರ್ಸನ್ ಮೊದಲ ರನ್ನರ್ ಅಪ್ ಆಗಿದ್ದು ಮೆಕ್ಸಿಕೊದ ಆಶ್ಲೇ ಅಲ್ವಿಡ್ರೆಜ್ ಎರಡನೇ ರನ್ನರ್ ಅಪ್ ಆಗಿದ್ದಾರೆ. ಟಾಪ್ 5 ಸ್ಪರ್ಧಿಗಳ ಸುತ್ತಿನಲ್ಲಿ ಕೊಲಂಬಿಯಾ ಮತ್ತು ಥೈಲ್ಯಾಂಡ್ ದೇಶದ ಸ್ಪರ್ಧಿಗಳು ಸಹ ಇದ್ದರು.

ಕಳೆದ ವರ್ಷದ ಮಿಸ್ ಯೂನಿವರ್ಸ್ ಫಿಲಿಫೈನ್ಸ್ ನ ಕ್ಯಾಟ್ರಿಯಾನ ಗ್ರೆ ತುಂಜಿ ಅವರಿಗೆ ಮಿಸ್ ಯೂನಿವರ್ಸ್ ಕಿರೀಟ ತೊಡಿಸಿದರು.
2017ರಲ್ಲಿ ಕೂಡ ದಕ್ಷಿಣ ಆಫ್ರಿಕಾದ ಡೆಮಿ ಲೈ ನೆಲ್ ಪೀಟರ್ಸ್ ಮಿಸ್ ಯೂನಿವರ್ಸ್ ಆಗಿದ್ದರು.