Recent Posts

Monday, January 20, 2025
ಕ್ರೀಡೆ

ರೋಹಿತ್ ಶರ್ಮಾ ದಾಖಲೆ ಮುರಿದು ಹೊಸ ದಾಖಲೆ ಬರೆದ ಕ್ಯಾಪ್ಟನ್ ವಿರಾಟ್ ಕೊಹ್ಲಿ-ಕಹಳೆ ನ್ಯೂಸ್

ತಿರುವನಂತಪುರ: ವೆಸ್ಟ್‌ಇಂಡೀಸ್ ವಿರುದ್ಧ ನಡೆದ ದ್ವಿತೀಯ ಟ್ವೆಂಟಿ-20 ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿದೆ. ಸೋಲಿನ ನಡುವೆಯೂ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮಿಂಚಿನ ದಾಖಲೆ ಮಾಡಿ ರೋಹಿತ್ ಶರ್ಮಾ ಅವರ ದಾಖಲೆಯನ್ನು ಮುರಿದಿದ್ದಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಹೌದು ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೆ ಕ್ಯಾಪ್ಟನ್ ಕೊಹ್ಲಿ ಭಾಜನವಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ದ್ವಿತೀಯ ಟಿ20 ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕ್ರಮವಾಗಿ 19 ಹಾಗೂ 15 ರನ್‌ಗಳನ್ನಷ್ಟೇ ಗಳಿಸಿದ್ದರು. ಹಾಗಿದ್ದರೂ ಸ್ಮರಣೀಯ ದಾಖಲೆಯ ಬರೆಯಲು ಕೊಹ್ಲಿ ಯಶಸ್ವಿಯಾಗಿದ್ದಾರೆ.

 

ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಗಳಿಸಿದವರು :
1. ವಿರಾಟ್ ಕೊಹ್ಲಿ: 2563 , 2. ರೋಹಿತ್ ಶರ್ಮಾ: 2562 , 3. ಮಾರ್ಟಿನ್ ಗಪ್ಟಿಲ್: 2436 , 4. ಶೋಯಿಬ್ ಮಲಿಕ್: 2263 , 5. ಬ್ರೆಂಡನ್ ಮೆಕಲಮ್: 2140