Saturday, November 23, 2024
ಸುದ್ದಿ

ಉದ್ಯೋಗಿಗಳಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಬಂಪರ್‌ ಸುದ್ದಿ: ಶೀಘ್ರವೇ ಹೆಚ್ಚಾಗಲಿದೆ ನಿಮ್ಮ ಸಂಬಳ

    

ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಖುಷಿ ಸುದ್ದಿಯೊಂದನ್ನು ನೀಡಿದೆ. ಪಿಎಫ್ ಗೆ ನೀಡುವ ಕೊಡುಗೆಯನ್ನು ಕಡಿಮೆ ಮಾಡಲು ಸರ್ಕಾರ ಯೋಚಿಸುತ್ತಿದೆ. ಇದ್ರಿಂದ ಉದ್ಯೋಗಿಗಳ ಟೇಕ್ ಹೋಂ ಸಂಬಳ ಹೆಚ್ಚಾಗಲಿದೆ. ಕಾರ್ಮಿಕ ಸಚಿವಾಲಯದ ಈ ಪ್ರಸ್ತಾವನೆಯ ಪ್ರಕಾರ, ಭವಿಷ್ಯ ನಿಧಿಗೆ ಕಂಪನಿಯ ಕೊಡುಗೆ ಪ್ರಸ್ತುತ ಶೇಕಡಾ 12 ರ ಮಟ್ಟದಲ್ಲಿ ಉಳಿಯುತ್ತದೆ. ಕಳೆದ ವಾರ ಕ್ಯಾಬಿನೆಟ್ ಅಂಗೀಕರಿಸಿದ ಸಾಮಾಜಿಕ ಭದ್ರತಾ ಮಸೂದೆ 2019 ರಲ್ಲಿ ಈ ಅಂಶಗಳನ್ನು ಸೇರಿಸಲಾಗಿದೆ.

ಈ ಮಸೂದೆಯ ಮೂಲಕ ದೇಶದ 50 ಕೋಟಿ ಜನರಿಗೆ ಸಾಮಾಜಿಕ ಭದ್ರತೆ ಒದಗಿಸಲಾಗುವುದು. ಎಲ್ಲಾ ಕಾರ್ಮಿಕರಿಗೆ ಪಿಂಚಣಿ, ವೈದ್ಯಕೀಯ, ಅನಾರೋಗ್ಯ, ಹೆರಿಗೆ, ಸಾವು ಮತ್ತು ಅಂಗವೈಕಲ್ಯಕ್ಕೆ ಸಂಬಂಧಿಸಿದ ಕಲ್ಯಾಣ ಸೌಲಭ್ಯಗಳನ್ನು ನೀಡಲಾಗುವುದು. ಸಾಮಾಜಿಕ ಭದ್ರತಾ ಮಸೂದೆಯನ್ನು ಈ ವಾರ ಸಂಸತ್ತಿನಲ್ಲಿ ಮಂಡಿಸಲಾಗುವುದು.

ಜಾಹೀರಾತು
ಜಾಹೀರಾತು
ಜಾಹೀರಾತು

ಇಪಿಎಫ್‌ಒ ಚಂದಾದಾರರಿಗೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಗೆ ಸ್ಥಳಾಂತರಗೊಳ್ಳುವ ಆಯ್ಕೆಯನ್ನು ನೀಡುವ ಹಿಂದಿನ ಪ್ರಸ್ತಾಪವನ್ನು ಕಾರ್ಮಿಕ ಸಚಿವಾಲಯ ಹಿಂತೆಗೆದುಕೊಂಡಿದೆ. ಮಸೂದೆಯ ಪ್ರಕಾರ, ಕನಿಷ್ಠ 10 ಕಾರ್ಮಿಕರು ಕೆಲಸ ಮಾಡುವ ಘಟಕಗಳು ಇಎಸ್‌ಐಸಿ ಅಡಿಯಲ್ಲಿ ಕಾರ್ಮಿಕರಿಗೆ ಅನೇಕ ಪ್ರಯೋಜನಗಳನ್ನು ನೀಡಬೇಕಾಗುತ್ತದೆ. ಅಪಾಯಕಾರಿ ಕೆಲಸ ಮಾಡುವ ಕಾರ್ಮಿಕರಿಗೆ ಇದು ಕಡ್ಡಾಯವಾಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು