Monday, January 20, 2025
ಸುದ್ದಿ

ಲೈಂಗಿಕ ಬಯಕೆ ಪೂರೈಸಿ ಚಿಕನ್‌ ತಂದರೆ ಪರೀಕ್ಷೆಯಲ್ಲಿ ಪಾಸ್‌- ಶಿಕ್ಷಕನ ಆಫರ್‌- ಕಹಳೆ ನ್ಯೂಸ್

ಛತ್ತೀಸ್‌ಗಡ್‌, ಡಿ 09  : ಇಲ್ಲಿನ ಶಿಕ್ಷಕನೋರ್ವ ಪರೀಕ್ಷೆಯಲ್ಲಿ ಪಾಸ್‌ ಮಾಡಬೇಕಾದರೆ ವಿದ್ಯಾರ್ಥಿನಿಯರಲ್ಲಿ ಸೆಕ್ಸ್‌ಗೆ ಸಹಕರಿಸಲು ಹಾಗೂ ಉಳಿದ ವಿದ್ಯಾರ್ಥಿಗಳಿಂದ ಚಿಕನ್‌ ತರಲು ಹೇಳುತ್ತಿದ್ದರೆಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜೇಶ್‌ ಕುಮಾರ್‌ ಭಾರದ್ವಾಜ್‌ ಎಂಬ ಶಿಕ್ಷಕನು ತನ್ನ ಬೇಡಿಕೆಗಳನ್ನು ಪೂರೈಸದಿದ್ದಲ್ಲಿ ಅದರ ಪರಿಣಾಮವನ್ನು ಅನುಭವಿಸ ಬೇಕಾಗುತ್ತದೆ ಹಾಗೂ ಪರೀಕ್ಷೆಯಲ್ಲಿ ಅನುತ್ತೀರ್ಣಗೊಳಿಸುವುದಾಗಿ ಬೆದರಿಕೆಯೊಡ್ಡುತ್ತಿದ್ದರು ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕುರಿತು ಮಾತಾನಾಡಿದ ಓರ್ವ ವಿದ್ಯಾರ್ಥಿನಿ “ನಾನು ಅವರ ದೈಹಿಕ ಬಯಕೆಗಳನ್ನು ಪೂರೈಸುವಂತೆ ಹಾಗೂ ಸೆಕ್ಸ್‌ ಮಾಡುವಂತೆ ಹೇಳುತ್ತಿದ್ದರು. ಹಾಗೆಯೇ ಚಿಕನ್‌ ತರಲು ಹೇಳುತ್ತಿದ್ದರು” ಎಂದು ಹೇಳಿದ್ದಾರೆ.

“ಅವರು ನನಗೆ ಚಿಕನ್‌ ತರುವಂತೆ ಹೇಳುತ್ತಿದ್ದರು. ತರದಿದ್ದಲ್ಲಿ ಅದರ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೇಳುತ್ತಿದ್ದರು. ಹಾಗೆಯೇ ನಾನು ಅವರಲ್ಲಿ ಯಾಕೆ ಮಾತಾನಾಡುತ್ತಿಲ್ಲ ಎಂದು ಮೊಬೈಲ್‌ಗೆ ಸಂದೇಶ ಕಳುಹಿಸುತ್ತಿದ್ದರು” ಎಂದು ಇನ್ನೋರ್ವ ವಿದ್ಯಾರ್ಥಿನಿ ತಿಳಿಸಿದ್ದಾರೆ.

“ನಾವು ಅವರ ಇಂತಹ ಬೇಡಿಕೆಗಳನ್ನು ಪೂರೈಸಿದಲ್ಲಿ ನಮಗೆ ಇತಿಹಾಸ ಪರೀಕ್ಷೆಯಲ್ಲಿ ನಕಲು ಮಾಡಲು ಅವಕಾಶ ಮಾಡಿಕೊಡುವುದಾಗಿ ಹೇಳುತ್ತಿದ್ದರು” ಎಂದು 12ನೇ ತರಗತಿಯ ವಿದ್ಯಾರ್ಥಿಗಳು ಹೇಳಿದ್ದಾರೆ.

ಆದರೆ ಈ ಎಲ್ಲಾ ಆರೋಪಗಳನ್ನು ಅಲ್ಲಗೆಳೆಯುತ್ತಿರುವ ಶಿಕ್ಷಕ ಭಾರದ್ವಾಜ್‌ “ನಾನು ಆ ರೀತಿ ಹೇಳಿಲ್ಲ. ಕೆಲವೊಮ್ಮೆ ನಾನು ವಿದ್ಯಾರ್ಥಿಗಳಿಗೆ ತಮಾಷೆ ಮಾಡುತ್ತಿದ್ದೆ ಅಷ್ಟೆ” ಎಂದು ಹೇಳಿದ್ದಾರೆ.

ಈ ಕುರಿತು ಮಾತಾನಾಡಿದ ಜಿಲ್ಲಾ ಶಿಕ್ಷಣ ಅಧಿಕಾರಿ ಎನ್‌.ಕುಂಜುರ್‌ “ಈ ವಿಷಯ ನನ್ನ ಗಮನಕ್ಕೆ ಬಂದಿದೆ. ಇದು ಗಂಭೀರವಾದ ವಿಷಯ. ಈ ಕುರಿತು ತನಿಖೆ ನಡೆಸಲಾಗುವುದು. ಶಿಕ್ಷಕನ ಮೇಲೆ ಅತೀ ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.