Monday, January 20, 2025
ಸುದ್ದಿ

ಮಂಗಳೂರು: ‘ದುರಹಂಕಾರ ಬಿಡಿ ಎಂದರೂ ಅರ್ಥವಾಗಲಿಲ್ಲ’ ಕಾಂಗ್ರೆಸ್ ಪರಿಸ್ಥಿತಿ ಕಂಡು ಕಣ್ಣೀರಿಟ್ಟ ಪೂಜಾರಿ-ಕಹಳೆ ನ್ಯೂಸ್

ಮಂಗಳೂರು: ಉಪ ಚುನಾವಣೆಯಲ್ಲಿ ಬಿಜೆಪಿ 12 ಕ್ಷೇತ್ರದಲ್ಲಿ , ಕಾಂಗ್ರೆಸ್ 2 ಕ್ಷೇತ್ರದಲ್ಲಿ ಹಾಗೂ ಪಕ್ಷೇತರ ಒಂದು ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ ಅಭ್ಯರ್ಥಿಗಳಿಗೆ ಸಿಕ್ಕ ಭರ್ಜರಿ ಮುನ್ನಡೆಯಿಂದ ಬಿಜೆಪಿ ನೇತೃತ್ವದ ಸರ್ಕಾರದ ಭವಿಷ್ಯ ಭದ್ರವಾಗಿದೆ. ಇನ್ನು ಉಪಸಮರದ ಫಲಿತಾಂಶದ ಹಿನ್ನಲೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಾಜಿ ಕೇಂದ್ರ ಸಚಿವ , ಕಾಂಗ್ರೆಸ್ ನ ಹಿರಿಯ ಮುಖಂಡ ಜನಾರ್ದನ ಪೂಜಾರಿ, ಬಿಜೆಪಿ ಗೆಲ್ಲುತ್ತದೆ ಕಾಂಗ್ರೆಸ್ ಸಾಯುತ್ತದೆ ಎಂದು ನಾನು ಈ ಹಿಂದೆಯೇ ಹೇಳಿದ್ದೆ ಎಂದು ಕಾಂಗ್ರೆಸ್ ಪಕ್ಷದ ಇಂದಿನ ಪರಿಸ್ಥಿತಿ ಕಂಡು ಕಣ್ಣೀರಿಟ್ಟರು.ಅವರು ಡಿ.09 ರ ಸೋಮವಾರ ಜೆಪ್ಪು ಪ್ರಶಾಂತ ನಿವಾಸ ಆಶ್ರಮದಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ ಯವರ ಹುಟ್ಟು ಹಬ್ಬದ ಕಾರ್ಯಕ್ರಮ ಭಾಗವಹಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.

” ಕಾಂಗ್ರೆಸ್ ಭವಿಷ್ಯದ ಬಗ್ಗೆ ನಾನು ನನ್ನ ಪಕ್ಷದವರಿಗೆ ಮೊದಲೇ ಹೇಳಿದ್ದೆ, ಅರ್ಥಮಾಡಿಕೊಳ್ಳಿ, ನೀವು ಹೀಗೆ ದುರಹಂಕಾರ ಮಾಡಿಕೊಂಡು ಹೋದರೆ ಬಿಜೆಪಿಯನು ತಡೆಯಲು ಸಾಧ್ಯವಿಲ್ಲ. ನನ್ನ ಪಕ್ಷದವರಲ್ಲಿ ಕೈ ಮುಗಿದು, ಕಣ್ಣೀರು ಸುರಿಸಿ ಹೇಳಿದೆ ಆದರೆ ನಮ್ಮ ಪಾರ್ಟಿಯವರಿಗೆ ಇದ್ಯಾವುದು ಅರ್ಥ ಆಗಲಿಲ್ಲ..ಇಂದು ಫಲಿತಾಂಶದ ಹಿರಬಿದ್ದಿದೆ, ಈ ಬಳಿಕವಾದರೂ ಅರ್ಥ ಆಯಿತಾ ಎಂದು ನಮ್ಮ ಪಕ್ಷದವರನ್ನು ಕೇಳುತ್ತಿದ್ದೇನೆ. ನಾನು ಈ ಭವಿಷ್ಯವನ್ನು ಕೆಲವು ತಿಂಗಳ ಹಿಂದೆ ಹೇಳಿದ್ದೆ, ದುರಹಂಕಾರ ಮಾಡಬೇಡಿ ಸರಿಪಡಿಸಿಕೊಂಡು ಹೋಗಿ, ಇಲ್ಲವಾದ್ರೆ ಬಿಜೆಪಿ ಬರುತ್ತದೆ ಕಾಂಗ್ರೆಸ್ ಸಾಯುತ್ತದೆ ” ಎಂದು ಹೇಳಿದರು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು