ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಎಂ.ಎಸ್.ಧೋನಿ ಇನ್ಮುಂದೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಡುವುದೇ ಇಲ್ಲವಾ? ಕೋಚ್ ರವಿಶಾಸ್ತ್ರಿ ಹೇಳಿದ್ದೇನು ಗೊತ್ತಾ- ಕಹಳೆ ನ್ಯೂಸ್
ಮುಂಬೈ: ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಎಂ.ಎಸ್.ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರಾ? ಅವರಿನ್ನು ಯಾವುದೇ ಪಂದ್ಯದಲ್ಲಿ ಆಡುವುದಿಲ್ಲವಾ? ಹೀಗೊಂದು ಅನುಮಾನ ಕ್ರಿಕೆಟ್ ಪ್ರೇಮಿಗಳಲ್ಲಿ, ಧೋನಿ ಅಭಿಮಾನಿಗಳಲ್ಲಿ ಮೂಡಿದೆ.
ನಿವೃತ್ತಿಯ ಬಗ್ಗೆ ಧೋನಿ ಇನ್ನೂ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸಿಲ್ಲ. ಆದರೆ 2019ರ ವಿಶ್ವಕಪ್ನಲ್ಲಿ ಸೆಮಿಫೈನಲ್ನಲ್ಲಿ ಭಾರತ ಸೋತ ಬಳಿಕ ಧೋನಿ ಯಾವುದೇ ಪಂದ್ಯವನ್ನೂ ಆಡಿಲ್ಲ.
ಈಗ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಧೋನಿಯವರ ಕ್ರಿಕೆಟ್ ಜೀವನದ ಬಗ್ಗೆ ಮಾತನಾಡಿದ್ದಾರೆ.
2020ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ತಾವು ಆಡಬಹುದು ಎಂದು ಮಾಜಿ ಕ್ಯಾಪ್ಟನ್ ಎಂ.ಎಸ್. ಧೋನಿಯವರಿಗೆ ಅನ್ನಿಸಿದರೆ ಖಂಡಿತ ಆಗ ತಂಡಕ್ಕೆ ಮರಳುತ್ತಾರೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ.
ಆ ವ್ಯಕ್ತಿ ದಂತಕತೆ. ಸದ್ಯ ಕ್ರಿಕೆಟ್ನಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಆದರೆ ಖಂಡಿತ ಮುಂದಿನ ಐಪಿಎಲ್ಗೆ ತಂಡಕ್ಕೆ ಮರಳುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ವಿಶ್ವಕಪ್ ಆದ ಮೇಲೆ ಮಹೇಂದ್ರ ಸಿಂಗ್ ಧೋನಿ ಅವರು ಜಮ್ಮುಕಾಶ್ಮಿರದಲ್ಲಿ ಭಾರತೀಯ ಸೇನೆಯು ಪ್ಯಾರಾಚೂಟ್ ರೆಜಿಮೆಂಟ್‌ನ (106 ಪ್ಯಾರಾ ಟಿಎ ಬೆಟಾಲಿಯನ್) ತರಬೇತಿ ಪಡೆದರು. ಅದಾದ ಮೇಲೆಯೂ ಸಹ ಕುಟುಂಬದೊಂದಿಗೆ ಕಾಲಕಳೆಯುತ್ತಿದ್ದಾರೆ ಹೊರತು ಕ್ರಿಕೆಟ್ಗೆ ಮರಳಿಲ್ಲ.
ನನ್ನ ಕ್ರಿಕೆಟ್ ಜೀವನದ ಬಗ್ಗೆ ಸದ್ಯಕ್ಕೆ ಏನೂ ಪ್ರಶ್ನೆ ಮಾಡಬೇಡಿ ಎಂದು ಧೋನಿ ಮಾಧ್ಯಮದವರನ್ನು ಕೇಳಿಕೊಂಡಿದ್ದಾರೆ. ಹೀಗೆ ಧೋನಿಯವರ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನದ ಬಗ್ಗೆ ಹಲವು ಅನುಮಾನಗಳು ಎದ್ದಿದೆ.
ಈಗ ರವಿ ಶಾಸ್ತ್ರಿಯವರ ಮಾತಿನಿಂದ ಧೋನಿ ಅಭಿಮಾನಿಗಳಲ್ಲಿ ಒಂದು ಹೋಪ್ ಮೂಡಿದೆ. ಅವರನ್ನು ಐಪಿಎಲ್ನಲ್ಲಿ ಚೆನ್ನೈ ಸೂಪರ್ಕಿಂಗ್ಸ್ ತಂಡದಲ್ಲಿ ನೋಡಬಹುದು ಎಂಬ ಆಶಯ ಮೂಡಿದೆ.(ಏಜೆನ್ಸೀಸ್)