Recent Posts

Monday, January 20, 2025
ಸುದ್ದಿ

ಈರುಳ್ಳಿ ಖರೀದಿಸಲು ಬಂದವನಿಗೆ ಹೃದಯಾಘಾತ: ಸಾವು-ಕಹಳೆ ನ್ಯೂಸ್

ಗುಡಿವಾಡ: ಈರುಳ್ಳಿ ದರ ಗಗನಕ್ಕೇರಿರುವುದು ಬಳಕೆದಾರರ ಕಣ್ಣೀರಿಗೆ ಕಾರಣವಾಗಿದೆ. ಆದರೆ ಈರುಳ್ಳಿ ಕೊಳ್ಳಲು ಮಾರುಕಟ್ಟೆಗೆ ಹೋದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಗುಡಿವಾಡದಲ್ಲಿ ನಡೆದಿದೆ.

55 ವರ್ಷದ ಸಾಂಬಯ್ಯ ಮೃತಪಟ್ಟ ವ್ಯಕ್ತಿ. ಸೋಮವಾರ ಆತ ಇಲ್ಲಿನ ರೈತ ಬಜಾರ್ ಗೆ ಈರುಳ್ಳಿ ಕೊಳ್ಳಲು ಬಂದಿದ್ದ. ಖರೀದಿಗಾಗಿ ಸರತಿ ಸಾಲಲ್ಲಿ ನಿಂತಿದ್ದ ವೇಳೆ ಸಾಂಬಯ್ಯ ಕುಸಿದು ಬಿದ್ದಿದ್ದ. ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಸಾಂಬಯ್ಯ ಬದುಕುಳಿಯಲಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಇದೇ ವಿಷಯವನ್ನು ವಿಧಾನಸಭಾ ಕಲಾಪದಲ್ಲಿ ಪ್ರಶ್ನಿಸಿದ್ದು, ಸರಕಾರದ ಪ್ರತಿಕ್ರಿಯೆಗೆ ಒತ್ತಾಯಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು