Monday, January 20, 2025
ಸುದ್ದಿ

ಎಂ.ಎಸ್. ಧೋನಿ ಅಭಿಮಾನಿಗಳಿಗೆ ಇಲ್ಲಿದೆ ಖುಷಿ ಸುದ್ದಿ- ಕಹಳೆ ನ್ಯೂಸ್

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಭಿಮಾನಿಗಳಿಗೆ ಖುಷಿ ಸುದ್ದಿಯೊಂದಿದೆ. ಮೈದಾನದಲ್ಲಿ ಧೋನಿ ನೋಡುವ ಅವಕಾಶ ಸದ್ಯ ಅಭಿಮಾನಿಗಳಿಗೆ ಸಿಕ್ತಿಲ್ಲ. ಆದ್ರೆ ಕಿರುತೆರೆ ಮೇಲೆ ಧೋನಿ ನೋಡಬಹುದಾಗಿದೆ.

ಧೋನಿ ಟಿವಿ ಸರಣಿಯೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದ್ರಲ್ಲಿ ಸೇನೆಯಲ್ಲಿ ಪ್ರಶಸ್ತಿ ಪಡೆದ ಅಧಿಕಾರಿಗಳ ಕಥೆಯನ್ನು ಹೇಳಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಟುಡಿಯೋ ನೆಕ್ಸ್ಟ್ ಶೀಘ್ರದಲ್ಲೇ ಧೋನಿ ಸಹಯೋಗದೊಂದಿಗೆ ಸೇನಾಧಿಕಾರಿಗಳ ಕಥೆಯನ್ನು ವಿವರಿಸಲಿದೆ. ಧೋನಿ ತಮ್ಮ ಶೋನಲ್ಲಿ ಧೈರ್ಯಶಾಲಿ ಪರಮವೀರ ಚಕ್ರ ಮತ್ತು ಅಶೋಕ ಚಕ್ರ ಪ್ರಶಸ್ತಿ ಪುರಸ್ಕೃತರ ಕಥೆಗಳನ್ನು ಹೇಳಲಿದ್ದಾರೆ. ಶೋನಲ್ಲಿ ಸೇನಾಧಿಕಾರಿಗಳ ಆಕರ್ಷಕ ಕಥೆಗಳಿರಲಿವೆ ಎಂದು ಮೂಲಗಳು ಹೇಳಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಸ್ತುತ ಈ ಸರಣಿಯ ಸ್ಕ್ರಿಪ್ಟ್ ಸಿದ್ಧಪಡಿಸಲಾಗುತ್ತಿದ್ದು, ಶೀಘ್ರದಲ್ಲೇ ಶೂಟಿಂಗ್ ಪ್ರಾರಂಭವಾಗಲಿದೆ. ಸೇನೆ ಹಾಗೂ ದೇಶಕ್ಕೆ ಸೇವೆ ಸಲ್ಲಿಸಿದ ಸೇನಾಧಿಕಾರಿಗಳ ಧೈರ್ಯ, ಮಹತ್ವವನ್ನು ಎಲ್ಲರ ಮುಂದಿಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.