Wednesday, November 27, 2024
ಸುದ್ದಿ

ಫೇಸ್ಬುಕ್, ವಾಟ್ಸಾಪ್ ಗೆ ಆಧಾರ್ ಲಿಂಕ್ ಬಗ್ಗೆ ದೆಹಲಿ ಹೈಕೋರ್ಟ್ ಹೇಳಿದ್ದೇನು- ಕಹಳೆ ನ್ಯೂಸ್

ಸಾಮಾಜಿಕ ಜಾಲತಾಣಗಳಿಗೆ ಆಧಾರ್ ಹಾಗೂ ಪಾನ್ ಕಾರ್ಡ್ ಲಿಂಕ್ ಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಮಹತ್ವದ ಸೂಚನೆ ನೀಡಿದೆ. ಸಾಮಾಜಿಕ ಜಾಲತಾಣದ ಜೊತೆ ಆಧಾರ್,‌ ಪಾನ್ ಲಿಂಕ್ ತಿರಸ್ಕರಿಸಿದೆ. ಸಾಮಾಜಿಕ ಜಾಲತಾಣದ ಜೊತೆ ಇವುಗಳನ್ನು ಲಿಂಕ್ ಮಾಡಿದ್ರೆ ಯಾವುದೇ ಕಾರಣವಿಲ್ಲದೆ ಡೇಟಾಗಳು ಸುಲಭವಾಗಿ ವಿದೇಶಿಗರ ಕೈ ಸೇರುತ್ತವೆ ಎಂದಿದೆ.

ಟ್ವಿಟರ್, ಫೇಸ್‌ಬುಕ್ ಮತ್ತು ವಾಟ್ಸಾಪ್‌ನಂತಹ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಆಧಾರ್, ಪಾನ್ ಅಥವಾ ಇನ್ನಾವುದೇ ಗುರುತಿನ ಚೀಟಿಗೆ ಲಿಂಕ್ ಮಾಡುವ ಬಗ್ಗೆ ಕೇಂದ್ರ ಸರ್ಕಾರದಿಂದ ಹೊಸ ಮಾಧ್ಯಮಗಳನ್ನು ರಚಿಸಬೇಕು. ಈಗಿರುವ ಕಾನೂನನ್ನು ತಿದ್ದುಪಡಿ ಮಾಡಬೇಕಾಗುತ್ತದೆ. ಈ ಪ್ರಕ್ರಿಯೆ ನ್ಯಾಯಾಲಯದ್ದಲ್ಲ. ಕೇಂದ್ರ ಸರ್ಕಾರದ್ದು ಎಂದು ಕೋರ್ಟ್ ಹೇಳಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಯಾವುದೇ ನಿರ್ದೇಶನ ನೀಡುವ ಉದ್ದೇಶ ಕೋರ್ಟ್ ಗಿಲ್ಲ. ಯಾಕೆಂದ್ರೆ ಈಗಾಗಲೇ ಈ ಬಗ್ಗೆ ಕಾನೂನು ಆಯೋಗದೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ಕೋರ್ಟ್ ಹೇಳಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು