Sunday, January 19, 2025
ಸಿನಿಮಾ

ನಟಿ ರಮ್ಯಾ ನಗ್ನ ಫೋಟೋ ವೈರಲ್ : ಈ ಬಗ್ಗೆ ಚಿತ್ರತಾರೆ ಹೇಳಿದ್ದೇನು? – ( ಸಿನಿ ಕಹಳೆ ) ಕಹಳೆ ನ್ಯೂಸ್

ಕೆಲ ತಿಂಗಳ ಹಿಂದೆಯಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಬೋಲ್ಡ್ ಫೋಟೋಗಳನ್ನು ಶೇರ್ ಮಾಡಿ ಸಖತ್ ಸದ್ದು ಮಾಡಿದ್ದ ನಟಿ ರಮ್ಯಾ ಪಾಂಡಿಯನ್ ಇದೀಗ ಇಕ್ಕಟಿಗೆ ಸಿಲುಕಿದ್ದಾರೆ.

ನಟಿ ರಮ್ಯಾ ಕಾಲಿವುಡ್​ನಲ್ಲಿ ಮೂರು ಚಿತ್ರಗಳಲ್ಲಿ ಅಭಿನಯಿಸಿದ್ದರು. ಆದರೆ ಸಿನಿಮಾದಿಂದ ಸಿಗದ ಹೆಸರು ನಟಿ ಟ್ವಿಟರ್​ನಲ್ಲಿ ಹಾಕಿದ್ದ ಸೀರೆ ಲುಕ್​ನಿಂದ ಲಭಿಸಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ರಾತ್ರೋರಾತ್ರಿ ನಟಿಯ ಫೋಟೋಗಳು ಭಾರೀ ವೈರಲ್ ಆಗಿದ್ಧವು. ಇದರ ಬೆನ್ನಲ್ಲೇ ಇದೀಗ ರಮ್ಯಾ ಪಾಂಡಿಯನ್ ಹೆಸರಿನಲ್ಲಿ ನಕಲಿ ಖಾತೆಗಳು ಹುಟ್ಟಿಕೊಂಡಿವೆ.


ರಮ್ಯಾ ಅವರ ಹೆಸರು ಮತ್ತು ಫೋಟೋ ಬಳಸಿ ಸೃಷ್ಟಿಸಲಾದ ಒಂದು ಖಾತೆಯಲ್ಲಿ ಅರೆ ನಗ್ನ ಚಿತ್ರಗಳನ್ನು ಅಪ್​ಲೋಡ್ ಮಾಡಲಾಗಿದೆ.

ಬೆನ್ನು ತಿರುಗಿಸಿ ನಿಂತು ಬ್ರಾ ತೆಗೆಯುತ್ತಿರುವ ಫೋಟೋವೊಂದನ್ನು ಅಪ್​ಲೋಡ್ ಮಾಡಿರುವ ಕಿಡಿಗೇಡಿಗಳು ಇದು ನನ್ನ ಹೊಸ ಫೋಟೋ ಎಂದು ಕ್ಯಾಪ್ಷನ್ ನೀಡಿದ್ದರು.


ಈ ಫೋಟೋವನ್ನು ಖುದ್ದು ನಟಿ ರಮ್ಯಾ ಅವರು ಅಪ್​ಲೋಡ್ ಮಾಡಿದ್ದಾರೆಂದು ಸುದ್ದಿಗಳು ಹರಿದಾಡಿದ್ದವು. ಅಲ್ಲದೆ ಹಲವರು ಈ ನಟಿಯ ನಗ್ನ ಚಿತ್ರವೆಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.

ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿರುವ ರಮ್ಯಾ, ನನ್ನ ಹೆಸರಿನಲ್ಲಿ ಹಲವು ನಕಲಿ ಖಾತೆಗಳು ಚಾಲ್ತಿಯಲ್ಲಿವೆ. ಆ ಮೂಲಕ ನನ್ನದೆಂದು ಅಶ್ಲೀಲ ಚಿತ್ರಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.

ಇಂತವರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ನಟಿ ರಮ್ಯಾ ಪಾಂಡಿಯನ್ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಇಂತಹ ಖಾತೆಗಳು ಕಂಡು ಬಂದರೆ ನನಗೆ ತಿಳಿಸುವಂತೆ ಮನವಿ ಮಾಡಿದ್ದಾರೆ.