ಬೆಳ್ತಂಗಡಿ : ಹಿಂದೂ ಜನಜಾಗೃತಿ ಸಮಿತಿ ಹಾಗೂ ಸಮಸ್ತ ಹಿಂದೂ ಧರ್ಮಪ್ರೇಮಿಗಳ ವತಿಯಿಂದ ಇಂದಬೆಟ್ಟು ಶ್ರೀ ಅರ್ದನಾರೇಶ್ವರ ಸನ್ನದಿಯಲ್ಲಿ ಹಿಂದೂ ಧರ್ಮಜಾಗೃತಿ ಸಭೆಯು ಧರ್ಮ ಜಾಗೃತಿ ಘೋಷಣೆಯೊಂದಿಗೆ ನಡೆಯಿತು. ಧರ್ಮ ಸಭೆಯ ಉದ್ಘಾಟನೆಯನ್ನು ದೀಪಪ್ರಜ್ವಲನೆಯ ಮೂಲಕ ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ವಕ್ತಾರರಾದ ಶ್ರೀ ಮೋಹನ ಗೌಡ ಇವರು ನೆರೆವೆರಿಸದರು. ಈ ವೇಳೆ ವ್ಯಾಸಪೀಠದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಚಂದ್ರ ಮೊಗೇರ, ಸನಾತನ ಸಂಸ್ಥೆಯ ವಕ್ತಾರೆಯಾದ ಸೌ ಲಕ್ಷ್ಮೀ ಪೈ ಉಪಸ್ಥಿತರಿದ್ದರು. ಸಭೆಗಿಂತ ಮೊದಲು ವೇದಮಂತ್ರ ಪಠಣ, ಶಂಖನಾದವಾಯಿತು. ಸಭೆಯ ಪ್ರಯುಕ್ತ ನಾವೂರಿನಿಂದ ಇಂದಬೆಟ್ಟು ಬಸ್ ನಿಲ್ದಾಣದ ಮೂಲಕ ಶ್ರೀ ಅರ್ಧನಾರೀಶ್ವರ ದೇವಸ್ಥಾನದ ಮುಂಭಾದವರೆಗೆ ಬೈಕ್ ರ‍್ಯಾಲಿ ಮಾಡಲಾಯಿತು.
ಹಿಂದೂ ಜನಜಾಗೃತಿ ಸಮಿತಿಯ ಪರಿಚಯವನ್ನು ಹಿಂದೂ ಜನಜಾಗೃತಿ ಸಮಿತಿಯ ದ.ಕ ಜಿಲ್ಲಾ ಸಮನ್ವಯಕರಾದ ಶ್ರೀ. ಚಂದ್ರ ಮೊಗೇರ ಇವರು ಮಾಡಿದರು. ಕಾರ್ಯಕ್ರಮದ ಸೂತ್ರಸಂಚಾಲನೆಯನ್ನು ಕು. ಚೇತನಾ ಹಾಗೂ ಕು. ರಶ್ಮಿ ಮಾಡಿದರು.
ಧರ್ಮದ ಮೇಲಿನ ಆಘಾತವನ್ನು ತಡೆಯಲು ಹಿಂದೂಗಳು ಸಂಘಟಿತರಾಗಬೇಕು.
-ಶ್ರೀ. ಮೋಹನ ಗೌಡ.
ಸೆಕ್ಯುಲರ್ ಸಂವಿಧಾನದ ಹೆಸರಿನಲ್ಲಿ ಹಿಂದೂಗಳ ಮೇಳೆ ಆನ್ಯಾಯ ಮಾಡಲಾಗುತ್ತಿದೆ. ರಾಜ್ಯದಲ್ಲಿ ಹಿಂದೂತ್ವಕ್ಕಾಗಿ ಕಾರ್ಯಮಾಡುವ ಹಿಂದೂ ನೇತಾರರ ಹತ್ಯೆ ಭೀಕರವಾಗಿ ನಡೆಯುತ್ತಿದೆ. ಹಿಂದೂಗಳ ದೇವಸ್ಥಾನ, ಮಠಗಳನ್ನು ವಶಪಡಿಸಿಕೊಳ್ಳಲು ಸರಕಾರ ಪ್ರಯತ್ನಿಸುತ್ತಿದೆ. ಹಿಂದೂಗಳ ಧಾರ್ಮಿಕ ಭಾವನೆಯನ್ನು ದುರ್ಲಕ್ಷ್ಯ ಮಾಡಲಾಗುತ್ತಿದೆ. ಮೂಢನಂಬಿಕೆ ಕಾಯಿದೆಯ ಹೆಸರಿನಲ್ಲಿ ಹಿಂದೂಗಳ ಧಾರ್ಮಿಕ ಹಬ್ಬಗಳನ್ನು ನಿಷೇಧಿಸುವ ಪ್ರಯತ್ನ ಮಾಡಲಾಗುತ್ತಿದೆ. ಈದ್ ಹೆಸರಿನಲ್ಲಿ ಹನುಮಾನ ಜಯಂತಿಯ ಮೇಲೆ ನಿಷೇಧ ಹಾಕಲಾಗುತ್ತಿದೆ. ಅದಕ್ಕಾಗಿ ಭಾರತವನ್ನು ಹಿಂದೂರಾಷ್ಟ್ರ ಸಂವಿಧಾನವೆಂದು ಬದಲಾಯಿಸುವುದು ಅವಶ್ಯವಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡ ಹೇಳಿದರು.
ಅವರು ಮುಂದೆ ಮಾತನಾಡುತ್ತಾ, ಯಾವ ವ್ಯವಸ್ಥೆಯಿಂದಾಗಿ ಹಿಂದೂ ಧರ್ಮದ ಸಂವರ್ಧನೆಯಾಗಬೇಕಿತ್ತೋ, ಧರ್ಮಶಿಕ್ಷಣ ಸಿಗಬೇಕಿತ್ತೋ, ಅದೇ ಹಿಂದೂಗಳ ಶ್ರದ್ಧಾಸ್ಥಾನ ದೇವಸ್ಥಾನಗಳಲ್ಲಿನ ಹಣ ಮಸೀದಿ, ಚರ್ಚ್ ನಿರ್ಮಾಣ ಕಾರ್ಯಕ್ಕೆ ವಿನಿಯೋಗವಾಗುತ್ತಿದೆ. ಆ ಮೂಲಕ ಇತರ ಪಂಥೀಯರ ಬೆಳವಣಿಗಾಗಿ ಉಪಯೋಗವಾಗುತ್ತಿದೆ. ಜಾತ್ಯಾತೀತ ವ್ಯವಸ್ಥೆಯಿಂದಾಗಿ ಹಿಂದೂಗಳ ಮೇಲೆ ಅನೇಕ ಆಘಾತಗಳಾಗುತ್ತಿದೆ.
ರಾಜ್ಯ ಸರಕಾರ ಅಂಧಶ್ರದ್ಧಾ ನಿರ್ಮೂಲನಾ ಕಾನೂನನ್ನು ತರುವ ಮೂಲಕ ಹಿಂದೂಗಳ ಧಾರ್ಮಿಕ ಆಚರಣೆಗಳನ್ನು ಹತ್ತಿಕ್ಕುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಅತ್ಯಂತ ಶ್ರದ್ಧೆಯಿಂದ ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ಮಡೆಸ್ನಾನದ ಮೇಲೆಯೂ ಈ ಕಾನೂನಿನ ಅನ್ವಯ ನಿರ್ಬಂಧವನ್ನು ಹೇರಲಾಗಿದೆ. ಹಿಂದೂ ಧರ್ಮದ ರಕ್ಷಣೆಯನ್ನು ಮಾಡುವ ಹಿಂದೂ ಕಾರ್ಯಕರ್ತರನ್ನು ವ್ಯವಸ್ಥಿತವಾಗಿ ಸಂಚನ್ನು ಮಾಡಿ ಕೊಲೆ ಮಾಡಲಾಗುತ್ತಿದೆ. ಇಂದು ಭಾರತದಲ್ಲಿ ಹಿಂದೂಗಳ ಅಸ್ತಿತ್ವದ ಪ್ರಶ್ನೆ ಎದುರಾಗಿದೆ. ಆದುದರಿಂದ ಜಾತ್ಯಾತೀತ ವ್ಯವಸ್ಥೆಯನ್ನು ಬದಲಾಯಿಸಿ ಧರ್ಮಾಧಿಷ್ಠಿತ ಹಿಂದೂರಾಷ್ಟ್ರದ ಸ್ಥಾಪನೆಯನ್ನು ಮಾಡುವ ಅವಶ್ಯಕತೆ ಇದೆ ಎಂದರು.
ಸಭೆಯಲ್ಲಿ ಮಾತನಾಡಿದ ಸನಾತನ ಸಂಸ್ಥೆಯ ಸೌ ಲಕ್ಷ್ಮೀ ಪೈ, ’ಇಂದಿನ ಮೆಕಾಲೆ ಶಿಕ್ಷಣ ಪದ್ಧತಿಯಿಂದಾಗಿ ನಮ್ಮ ಭಾರತೀಯ ಸಂಸ್ಕೃತಿಯ ಅವನತಿಯಾಗುತ್ತಿದೆ. ಪಾಶ್ಚಿಮಾತ್ಯ ಸಂಸ್ಕೃತಿಯ ಅಂಧಾನುಕರನೆಯಿಂದಾಗಿ ನಾವು ನಮ್ಮ ಶ್ರೇಷ್ಠ ಹಿಂದೂ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ’ಸುಖಸ್ಯ ಮೂಲಂ ಧರ್ಮಃ’ ಅಂದರೆ ಧರ್ಮಾಚರಣೆಯಿಂದಲೇ ಸುಖ ಸಿಗಲು ಸಾಧ್ಯವಿದೆ. ನಾವೆಲ್ಲರೂ ಸ್ವತಃ ಧರ್ಮಾಚರಣೆಯನ್ನು ಮಾಡಿ ಸಮಾಜದ ವ್ಯಕ್ತಿಗಳಿಗೆ ಧರ್ಮಚಾರಣೆಯ ಮಹತ್ವವನ್ನು ತಿಳಿಸುವುದು ಅವಶ್ಯಕತೆ ಇದೆ’ ಎಂದರು.
ಸಭಾಸ್ಥಳದಲ್ಲಿ ಧರ್ಮಶಿಕ್ಷಣ, ರಾಷ್ಟ್ರ-ಧರ್ಮರಕ್ಷಣೆಯ ಪ್ಭೋದನೆಯನ್ನು ಮಾಡುವ ಫ್ಲೆಕ್ಸ್ ಪ್ರದರ್ಶನ, ಸನಾತನದ ಆಧ್ಯಾತ್ಮಿಕ ಗ್ರಂಥ ಹಾಗೂ ಸಾತ್ವಿಕ ಉತ್ಪಾದನೆಗಳ ಮಳಿಗೆಯನ್ನು ಕೂಡ ಏರ್ಪಡಿಸಲಾಗಿತ್ತು.
ವರದಿ : ಕಹಳೆ ನ್ಯೂಸ್