ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದ ದತ್ತ ಪೀಠ ದಲ್ಲಿ ನಡೆಯಲಿರುವ ದತ್ತಜಯಂತಿಗೆ ಪುತ್ತೂರು ಜಿಲ್ಲೆಯಿಂದ 2500 ಸಾವಿರ ಬಜರಂಗದಳದ ಕಾರ್ಯಕರ್ತರು-ಕಹಳೆ ನ್ಯೂಸ್
ಡಿಸೆಂಬರ್ 10 ರಿಂದ ಪ್ರಾರಂಭವಾಗಿರುವ ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದಲ್ಲಿರುವ ಶ್ರೀ ಗುರು ದತ್ತಾತ್ರೇಯರ ಪುಣ್ಯ ಕ್ಷೇತ್ರ ದತ್ತ ಪೀಠ ವಿಶ್ವ ಹಿಂದೂ ಪರಿಷತ್ ಬಜರಂಗದಳದ ನೇತೃತ್ವದಲ್ಲಿ ದಲ್ಲಿ ನಡೆಯುವ ದತ್ತಜಯಂತಿ ಉತ್ಸವಕ್ಕೆ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಪುತ್ತೂರು ಜಿಲ್ಲೆಯ 7 ಪ್ರಖಂಡಗಳಾದ ಪುತ್ತೂರು,ವಿಟ್ಲ,ಸುಳ್ಯ,ಬೆಳ್ತಂಗಡಿ,ಬಂಟ್ವಾಳ,ಕಡಬ,ವೇಣೂರು ಪ್ರಖಂಡಗಳಿಂದ ಒಟ್ಟು 2500 ರಷ್ಟು ದತ್ತಮಾಲಧಾರಿ ಬಜರಂಗದಳದ ಕಾರ್ಯಕರ್ತರು 12 ರಂದು ನಡೆಯಲಿರುವ ದತ್ತಜಯಂತಿ ಹಾಗೂ ದತ್ತಪಾದುಕೆ ದರ್ಶನಕ್ಕೆ ತೆರಳಲಿದ್ದಾರೆ.
ಇಂದು 11 ರಂದು ದತ್ತಮಾಲೆ ಧರಿಸಿದ ಬಜರಂಗದಳದ ಕಾರ್ಯಕರ್ತರಿಂದ ಪುತ್ತೂರು ನಗರ,ವಿಟ್ಲ,ಸುಳ್ಯ ದಲ್ಲಿ ನಗರ ಸಂಕೀರ್ತನೆ ಯಾತ್ರೆ ನಡೆಯಲಿದೆ ಎಂದು ಮುರುಳಿ ಕೃಷ್ಣ ಹಸಂತ್ತಡ್ಕ ಪ್ರಾಂತ ಸಹ ಸಂಚಾಲಕ್ ಬಜರಂಗ ದಳ ಕರ್ನಾಟಕ ದಕ್ಷಿಣ ಪ್ರಾಂತ ಹಾಗೂ ಶ್ರೀಧರ್ ತೆಂಕಿಲ ಜಿಲ್ಲಾ ಸಂಚಾಲಕ್ ಬಜರಂಗದಳ ಪುತ್ತೂರು ಜಿಲ್ಲೆ; ಮಾಧ್ಯಕ್ಕೆ ತಿಳಿಸಿದ್ದಾರೆ.