- ನವದೆಹಲಿ : ದೇಶಾಧ್ಯಂತ ಡಿಸೆಂಬರ್ 15 ರಿಂದ ಟೋಲ್ ಗಳಲ್ಲಿ ಎಲ್ಲಾ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಲಾಗಿದೆ, ಇದೀಗ ಕೇಂದ್ರ ಸರ್ಕಾರವು ವಾಹನ ಸವಾರರಿಗೆ ಮತ್ತೊಂದು ಶಾಕ್ ನೀಡಿದ್ದು, ಪಾಸ್ಟ್ ಟ್ಯಾಗ್ ಹೊಂದಿದ ವಾಹನಗಳಿಗೆ ಮಾತ್ರ ವಿಮೆ ಮಾಡಲಾಗುವುದು ಎಂಬ ನಿಯಮ ಜಾರಿಗೆ ತರುವ ಚಿಂತನೆ ನಡೆಸಿದೆ.
ನಗದು ರಹಿತ ಶುಲ್ಕಪಾವತಿ ಹಾಗೂ ತಡೆರಹಿತ ಸಂಚಾರಕ್ಕೂ ಇದು ಅನುಕೂಲವಾಗಲಿದೆ. ಈ ಎಲ್ಲಾ ಕಾರಣದಿಂದಾಗಿ ಡಿಸೆಂಬರ್ 15 ರಿಂದ ದೇಶಾಧ್ಯಂತ ಎಲ್ಲಾ ಟೋಲ್ ಗಳಲ್ಲೂ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಲಾಗಿದೆ ಹೀಗಾಗಿ ಫಾಸ್ಟ್ ಟ್ಯಾಗ್ ಹೊಂದಿದರೆ ಮಾತ್ರ ವಾಹನಕ್ಕೆ ವಿಮೆ ಎಂಬ ಪಾಲಿಸಿ ಜಾರಿಗೆ ತರುವ ಚಿಂತನೆಯಲ್ಲಿದೆ.
ಡಿಸೆಂಬರ್ 15 ರ ನಂತ್ರ ಫಾಸ್ಟ್ ಟ್ಯಾಗ್ ಇಲ್ಲದ ವಾಹನ ಟೋಲ್ ಗೇಟ್ ಪ್ರವೇಶಿಸಲು ಅವಕಾಶವಿಲ್ಲ. ಒಂದು ವೇಳೆ ಹೀಗೆ ಫಾಸ್ಟ್ ಟ್ಯಾಗ್ ಇಲ್ಲದೇ ಟೋಲ್ ಗೇಟ್ ಪ್ರವೇಶಿಸಿದರೇ, ಚಾಲ್ತಿಯಲ್ಲಿರುವ ಶುಲ್ಕಕ್ಕಿಂತ ದುಪ್ಪಟ್ಟು ಶುಲ್ಕ ಕಟ್ಟಬೇಕಾಗುತ್ತದೆ. ಇಂತಹ ಸಮಸ್ಯೆ ನಿವಾರಿಸಲು ಫಾಸ್ಟ್ ಟ್ಯಾಗ್ ಗಳನ್ನು 22 ಬ್ಯಾಂಕ್ ಗಳಿಂದ ಹಾಗೂ 28,500 ಮಾರಾಟ ಕೇಂದ್ರಗಳಿಂದ ಖರೀದಿಸಲು ಅವಕಾಶ ಮಾಡಿಕೊಡಲಾಗಿದೆ. ವಾಹನ ಸವಾರರು ಡಿ.15ಕ್ಕೂ ಮೊದಲು ಕಡ್ಡಾಯವಾಗಿ ಅಳವಡಿಸಿಕೊಂಡು ಬಳಕೆ ಮಾಡುವಂತೆ ಸೂಚಿಸಲಾಗಿದೆ.