ಎಚ್‌ಎಂಡಿ ಗ್ಲೋಬಲ್ ಇತ್ತೀಚಿನ ಆಂಡ್ರಾಯ್ಡ್ ಗೋ ಎಡಿಷನ್ ಸ್ಮಾರ್ಟ್‌ಫೋನ್ ನೋಕಿಯಾ ಸಿ 1 ಬಿಡುಗಡೆ ಮಾಡಿದೆ. ಕ್ವಾಡ್-ಕೋರ್ ಪ್ರೊಸೆಸರ್, 1 ಜಿಬಿ ರ್ಯಾಮ್ ಮತ್ತು 2,500ಎಂಹೆಚ್ ಬ್ಯಾಟರಿ ಈ ಸ್ಮಾರ್ಟ್ಫೋನ್ ವಿಶೇಷ.
ಫೀಚರ್ ಫೋನ್ ನಿಂದ ಮೊದಲ ಬಾರಿ ಸ್ಮಾರ್ಟ್ಫೋನ್ ಗೆ ಶಿಫ್ಟ್ ಆಗುವವರಿಗೆ ಈ ಫೋನ್ ಬೆಸ್ಟ್ ಎಂದು ಕಂಪನಿ ಹೇಳಿದೆ.
ಈ ಸ್ಮಾರ್ಟ್ಫೋನ್ ಗೆ 4ಜಿ ಸಂಪರ್ಕವನ್ನು ನೀಡಿಲ್ಲ. 3ಜಿ ಸಂಪರ್ಕದೊಂದಿಗೆ ಕಡಿಮೆ ಬೆಲೆಗೆ ಈ ಫೋನ್ ಗ್ರಾಹಕರಿಗೆ ಲಭ್ಯವಿದೆ ಎಂದು ಕಂಪನಿ ಹೇಳಿದೆ. ಆದ್ರೆ ನೋಕಿಯಾ ಸಿ 1 ಮೊಬೈಲ್ ಬೆಲೆ ಎಷ್ಟೆಂದು ಕಂಪನಿ ಹೇಳಿಲ್ಲ. ಆಫ್ರಿಕಾ, ಮಧ್ಯಪ್ರಾಚ್ಯ ಮತ್ತು ಏಷ್ಯಾ ಪೆಸಿಫಿಕ್ ಮಾರುಕಟ್ಟೆಗಳಲ್ಲಿ ಫೋನ್ ಬಿಡುಗಡೆಯಾಗಲಿದೆ. ಕಪ್ಪು ಹಾಗೂ ಕೆಂಪು ಬಣ್ಣದಲ್ಲಿ ಮೊಬೈಲ್ ಲಭ್ಯವಿದೆ.
ಡ್ಯುಯಲ್-ಸಿಮ್ ಬೆಂಬಲವನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 9 ಪೈನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನ್ 5.45 ಇಂಚಿನ ಎಫ್‌ಡಬ್ಲ್ಯುವಿಜಿಎ ಪ್ಲಸ್ ಐಪಿಎಸ್ ಡಿಸ್ಪ್ಲೇ ಹೊಂದಿದೆ. ಈ ಸ್ಮಾರ್ಟ್ಫೋನ್ 1.3GHz ವೇಗದೊಂದಿಗೆ ಕ್ವಾಡ್-ಕೋರ್ ಪ್ರೊಸೆಸರ್ ಹೊಂದಿದೆ. ಹಿಂದೆ ಹಾಗೂ ಮುಂದೆ 5ಎಂಪಿ ಕ್ಯಾಮರಾವನ್ನು ನೀಡಲಾಗಿದೆ.