Railway Recruitment 2019: ರೈಲ್ವೆ ಉದ್ಯೋಗಾವಕಾಶ: 8ನೇ, 10ನೇ ತರಗತಿ ಪಾಸಾದವರಿಗೆ ಸುವರ್ಣಾವಕಾಶ- – ಕಹಳೆ ನ್ಯೂಸ್
ಈ ಹುದ್ದೆಗಳಳಿಗೆ 10 ನೇ ಪಾಸ್ ಆದವರೂ ಅರ್ಜಿ ಸಲ್ಲಿಸಬಹುದು. ಹಾಗೆಯೇ ಕೆಲವು ಹುದ್ದೆಗಳಿಗೆ ಕನಿಷ್ಠ ಅರ್ಹತೆ 8 ನೇ ಪಾಸ್ ಆಗಿದ್ದರೆ ಸಾಕು. ಈಗಾಗಲೇ ಅಪ್ಲಿಕೇಶನ್ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 6, 2020. ಇನ್ನು ಆನ್‌ಲೈನ್ ಅರ್ಜಿ ಸಲ್ಲಿಸುವಲ್ಲಿ ಅಥವಾ ಅರ್ಜಿ ನಮೂನೆಯನ್ನು ಮುದ್ರಿಸುವಲ್ಲಿ ಯಾವುದೇ ಸಮಸ್ಯೆ ಇದ್ದಲ್ಲಿ ಅಭ್ಯರ್ಥಿಗಳು 9121276839, 9121276846 ಮತ್ತು ಇಮೇಲ್ helpdeskrrcbbs@gmail.com ಅನ್ನು ಸಂಪರ್ಕಿಸಬಹುದು. ನೇಮಕಾತಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.
ಹುದ್ದೆಗಳ ಹೆಸರು: ಫಿಟ್ಟರ್, ಶೀಟ್ ಮೆಟಲ್ ವರ್ಕರ್, ವೆಲ್ಡರ್, ಮೆಕ್ಯಾನಿಕ್, ಕಾರ್ಪೆಂಟರ್, ಪೇಂಟರ್, ಟ್ರೇಡ್ ವೆಲ್ಡರ್ ಮತ್ತು ಇತರರು
ಒಟ್ಟು ಹುದ್ದೆಗಳ ಸಂಖ್ಯೆ:
1,216 ಹುದ್ದೆಗಳು
ವಿದ್ಯಾರ್ಹತೆ: ಅಭ್ಯರ್ಥಿ 10 ನೇ ತರಗತಿ ಉತ್ತೀರ್ಣರಾಗಿರಬೇಕು. ಟ್ರೇಡ್ ವೆಲ್ಡರ್, ಶೀಟ್ ಮೆಟಲ್ ವರ್ಕರ್, ಕಾರ್ಪೆಂಟರ್ ಮತ್ತು ವೈರ್‌ಮ್ಯಾನ್ ಹುದ್ದೆಗಳಿಗೆ 8 ನೇ ತರಗತಿ ಪಾಸ್ ಆದವರು ಅರ್ಜಿ ಸಲ್ಲಿಸಬಹುದು.
ವಯೋಮಿತಿ:
ಅರ್ಜಿದಾರನ ಕನಿಷ್ಠ ವಯಸ್ಸು 15 ವರ್ಷಗಳು ಹಾಗೂ ಗರಿಷ್ಠ ವಯೋಮಿತಿ 24 ವರ್ಷ ಎಂದು ನಿಗದಿಪಡಿಸಲಾಗಿದೆ.
ಆಯ್ಕೆ ಪ್ರಕ್ರಿಯೆ:
10 ನೇ ತರಗತಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇದಕ್ಕಾಗಿ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ.
ಅರ್ಜಿ ಶುಲ್ಕ:
ಜನರಲ್, ಒಬಿಸಿ – 100 ರೂ.
ಎಸ್‌ಸಿ, ಎಸ್‌ಟಿ, ಮಹಿಳೆಯರು, ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ – ಯಾವುದೇ ಶುಲ್ಕ ಇರುವುದಿಲ್ಲ
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತರು ರೈಲ್ವೆಯ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅಲ್ಲದೆ, ಕೆಳಗೆ ನೀಡಿರುವ ನೇರ ಲಿಂಕ್ ಅನ್ನುಮಾಡುವುದರ ಮೂಲಕ ನೀವು ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 6, 2020.
(ವಿ.ಸೂ: ಕೆಲವೊಂದು ಆಯಪ್ಗಳಲ್ಲಿ ಲಿಂಕ್ ಕಾಣಿಸಿಕೊಳ್ಳುವುದಿಲ್ಲ. ಹೀಗಾಗಿ News18 Kannada App ಡೌನ್ಲೋಡ್ ಮಾಡುವ ಮೂಲಕ ನಿಮ್ಮ ಲಿಂಕ್ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು)