ಪುತ್ತೂರು ಗ್ಯಾಂಗ್ ರೇಪ್ ಪ್ರಕರಣ : ಹೈಕೋರ್ಟ್ ಜಾಮೀನು ಮಂಜೂರು ಮಾಡಲು ನೀಡಿದ ಕಾರಣವೇನುಗೊತ್ತೇ…? ಷರತ್ತುಗಳು ಏನು ಏನು ಗೊತ್ತೇ…? ಗ್ಯಾಂಗ್ ರೇಪ್ ಬಗ್ಗೆ ಅನುಮಾನ ಮೂಡಿಸಿದೆ ಆದೇಷ ” Exclusive ವರದಿ “- ಕಹಳೆ ನ್ಯೂಸ್
ಪುತ್ತೂರು: ಬೆಳ್ಳಿಪ್ಪಾಡಿಯ ಕಠಾರದ ನಿರ್ಜನ ಪ್ರದೇಶದಲ್ಲಿ ಪುತ್ತೂರಿನ ಪ್ರತಿಷ್ಠಿತ ಪದವಿ ಕಾಲೇಜೊಂದರ ಮೊದಲ ವರ್ಷದ ವಿದ್ಯಾರ್ಥಿನಿಯೊಬ್ಬಳ ಮೇಲೆ ಅದೇ ಕಾಲೇಜ್‌ನ ಐವರು ವಿದ್ಯಾರ್ಥಿಗಳಿಂದ ಕಾರಿನಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಂದ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವ ಐವರು ವಿದ್ಯಾರ್ಥಿಗಳ ಪೈಕಿ ಓರ್ವನಿಗೆ ಹೈಕೋರ್ಟ್ ಕಳೆದ ಕೆಲದಿನಗಳ ಹಿಂದೆ ಜಾಮೀನು ಮಂಜೂರು ಮಾಡಿತ್ತು. ಇದೀಗ ಉಳಿದೆಲ್ಲಾ ಆರೋಪಗಳಿಗೂ ಜಾಮೀನು ಮಂಜೂರು ಮಾಡಿದೆ.
ಹೈಕೋರ್ಟ್ ಜಾಮೀನು ನೀಡಲು ಪೂರಕವಾದ ಅಂಶಗಳೇನು..?
ಪ್ರಮುಖವಾಗಿ ಈ ಪ್ರಕರಣ ಎಪ್ರಿಲ್ 03 2019ರಂದು ನಡೆದಿದೆ ಎಂದು ಆರೋಪಿಸಿದ್ದು, ಘಟನೆಯ ನಂತರ ಅತ್ಯಾಚಾರಕ್ಕೆ ಒಳಪಟಿದ್ದೇನೆ ಎನ್ನುವ ಸಂತ್ರಸ್ತ ಬಸ್ ನಿಲ್ದಾಣದಿಂದ ತನ್ನಪಾಡಿಗೆ ತಾನು ಮನೆಗೆ ಹೋಗಿದ್ದಳು ನಂತರ 03. 07. 2019 ರಂದು ಅಂದರೆ ಸರಿ ಸುಮಾರು ಮೂರು ತಿಂಗಳ ನಂತರ ದೂರು ನೀಡುವ ತನಕವೂ ತನ್ನ ತಂದೆ ತಾಯಿಯಲ್ಲಾಗಲಿ, ಸ್ನೇಹಿತರಲ್ಲಾಗಲಿ ಅಥವಾ ಇನ್ನು ಯಾವುದೇ ವ್ಯಕ್ತಿಗಳಲ್ಲಾಗಲಿ ತನ್ನ ಮೇಲೆ ಅತ್ಯಾಚಾರ ಆಗಿದೆ ಎಂದು ಹೇಳಿಕೊಂಡಿರಲಿಲ್ಲ, ಸಂತ್ರಸ್ಥೆ ಪತ್ರಿಕೋದ್ಯಮದ ವಿದ್ಯಾರ್ಥಿನಿ ಹಾಗೂ ಪ್ರಾಯ ಪ್ರಬುದ್ದೆಯಾಗಿದ್ದರೂ ಯಾವುದೇ ದೂರು ನೀಡಿದಿರುವುದು ಅನುಮಾನಕ್ಕೆಡೆಮಾಡಿ ಕೊಡುತ್ತದೆ.
ವೈದ್ಯರ ಅಭಿಪ್ರಾಯದಂತೆ ನಡೆದಿದೆ ಎನ್ನಲಾದ ಘಟನೆಯ ಸಾಬೀತಿಗೆ ಪೂರಕವಾಗಿರುವುದಿಲ್ಲ. ಅದೇ ಪ್ರಕಾರ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಆ. ಕ್ರ. ಸಂಖ್ಯೆ 68/2019 ರಂತೆ ಪ್ರಕರಣ ಒಂದು ದಾಖಲಾಗಿದ್ದು, ಅದರಲ್ಲಿ ಹುಡುಗಿಯೊಬ್ಬಳು ತಾನು ಸ್ವತಂತ್ರವಾಗಿ ಬೆತ್ತಲಾಗುವ ದೃಶ್ಯದ ವಿಡಿಯೋ ಇದ್ದು, ಅದನ್ನು ಸಂತ್ರಸ್ತೆ ತನ್ನದೆಂದು ಒಪ್ಪಿಕೊಂಡಿರುತ್ತಾರೆ. ಕೇವಲ ಈ ವಿಚಾರಗಳಷ್ಟೇ ಘಟನೆಯ ಸತ್ಯಾಸತ್ಯತೆಯನ್ನು ನಿರ್ಧರಿಸಲು ಸಕಾಗದಿದ್ದರು ಘಟನೆಯ ನೈಜತೆಯ ಬಗ್ಗೆ ಅನುಮಾನ ಮೂಡಿಸುತ್ತದೆ. ಅದೇ ಪ್ರಕಾರ ಘಟನೆಯ ದೃಶ್ಯಾವಳಿಗಳನ್ನೊಳಗೊಂಡಿಗೆ ಎನ್ನುವ ವಿಡಿಯೋ ಕೂಡ ಈ ಹಂತದಲ್ಲಿ ಇದೊಂದು ಗ್ಯಾಂಗ್ ರೇಪ್ ಪ್ರಕರಣ ಎಂಬ ನಿರ್ಧಾರಕ್ಕೆ ಬರಲು ಸಹಕಾರಿಯಾಗಿರುವುದಿಲ್ಲ. ಈ ಹಂತದಲ್ಲಿ ಈ ಮೇಲಿನ ಎಲ್ಲಾ ಎಲ್ಲಾ ವಿಚಾರಗಳ ಸ್ಪಷ್ಟ/ ನಿಖರ ನಿರ್ಧಾರಕ್ಕೆ ಬರಲು ಸಾದ್ಯವಾಗದಿದ್ದರೂ ಆರೋಪಿಗಳ ಹಾಗೂ ಪ್ರಕರಣದ ಸಂಬಂಧವನ್ನೂ ಪೂರ್ತಿ ತಳ್ಳಿಹಾಕುವಂತಿಲ್ಲ, ಆರೋಪಿಗಳು ವಿದ್ಯಾರ್ಥಿಗಳು ಹಾಗೂ ಅವರನ್ನು ಜೈಲಿನಲ್ಲಿ ಇರಿಸಿದರೆ ಅವರ ವಿದ್ಯಾಭ್ಯಾಸಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ ಎಂಬಿತ್ಯಾದಿ ಅಂಶಗಳನ್ನು ಗಮನಿಸಿ ಆರೋಪಿಗಳಿಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಷರತ್ತುಗಳು ಏನು :
* ಆರೋಪಿಗಳು ಎರಡು ಲಕ್ಷದ ಸ್ವಂತ ಮುಚ್ಚಳಿಕೆ ಹಾಗೂ ಅದೇ ಮೊತ್ತಕ್ಕೆ ಎರಡು ಜನ ಜಾಮೀನು ದಾರರನ್ನು ನೀಡತಕ್ಕದ್ದು.
* ಆರೋಪಿಗಳು ಸಾಕ್ಷಿ ನಾಶ ಮಾಡಬಾರದು.
* ಅಧೀನ ನ್ಯಾಯಾಲಯದಲ್ಲಿ ಸರಿಯಾಗಿ ಹಾಜರಿರಬೇಕು ಮತ್ತು ನ್ಯಾಯಾಲಯದ ವ್ಯಾಪ್ತಿಬಿಟ್ಟು ಹೋಗಬಾರದು.