Monday, November 25, 2024
ಸುದ್ದಿ

ನಾದಿನಿ ಮದುವೆಗೆ ಸಾನಿಯಾ ಮಿರ್ಜಾ ಪತಿ ಶೋಯೆಬ್ ಬರದಿರಲು ಇದು ಕಾರಣ – ಕಹಳೆ ನ್ಯೂಸ್

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಸಹೋದರಿ ಅನಮ್ ಗುರುವಾದ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರ ಪುತ್ರ ಅಸದ್ ಅವರನ್ನು ಅನಮ್ ವಿವಾಹವಾದರು. ಅನೇಕ ಸೆಲೆಬ್ರಿಟಿಗಳು ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಆದ್ರೆ ಅನಮ್ ಬಾವ ಅಂದ್ರೆ ಸಾನಿಯಾ ಮಿರ್ಜಾ ಪತಿ ಶೋಯೆಬ್ ಮಲಿಕ್ ಮದುವೆ ಸಮಾರಂಭಕ್ಕೆ ಗೈರಾಗಿದ್ದರು.

ನಾದಿನಿಯ ಮದುವೆಗೆ ಬಾವ ಬಂದಿಲ್ಲವೆಂದ್ರೆ ಏನರ್ಥ. ಈ ಬಗ್ಗೆ ಅನೇಕ ಸುದ್ದಿಗಳು ಹರಡಿದ್ದವು. ಕೊನೆಗೂ ಮಲಿಕ್ ಯಾಕೆ ಬರಲಿಲ್ಲ ಎಂಬುದಕ್ಕೆ ಕಾರಣ ಗೊತ್ತಾಗಿದೆ. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಬಾಂಗ್ಲಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಶೋಯೆಬ್ ಆಡ್ತಿದ್ದಾರೆ. ರಾಜ್‌ಶಾಹಿ ರಾಯಲ್ಸ್ ಪರ ಆಡ್ತಿರುವ ಮಲಿಕ್ ಗುರುವಾರವೂ ಮೈದಾನಕ್ಕಿಳಿದಿದ್ದರು. ಈ ಪಂದ್ಯದಲ್ಲಿ ಅವ್ರ ತಂಡ ಗೆಲುವು ಸಾಧಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಾನಿಯಾ ಮಿರ್ಜಾ ಸಹೋದರಿ ಬಗ್ಗೆ ಮಾತನಾಡುವುದಾದ್ರೆ ಅನಮ್ ಗೆ ಇದು ಎರಡನೇ ಮದುವೆ. 2016 ರಲ್ಲಿ ಅನಮ್, ಹೈದ್ರಾಬಾದ್ ಉದ್ಯಮಿ ಜೊತೆ ಮದುವೆಯಾಗಿದ್ದರು. ಎರಡು ವರ್ಷದ ನಂತ್ರ ಇಬ್ಬರು ತಲಾಕ್ ಪಡೆದಿದ್ದರು. ತಲಾಕ್ ಸಿಕ್ಕಿ ಒಂದು ವರ್ಷದ ನಂತ್ರ ಅನಮ್ ತನಗಿಂದ ಮೂರು ವರ್ಷ ಚಿಕ್ಕವಯಸ್ಸಿನ ಅಸದ್ ಜೊತೆ ಮದುವೆಯಾಗಿದ್ದಾರೆ

ಜಾಹೀರಾತು
ಜಾಹೀರಾತು
ಜಾಹೀರಾತು