ನವದೆಹಲಿ : ಮೊಬೈಲ್ ಬಳಕೆದಾರರಿಗೆ ಟ್ರಾಯ್ ಬಿಗ್ ಶಾಕಿಂಗ್ ನ್ಯೂಸ್ ನೀಡಿದ್ದು, ಶೀಘ್ರವೇ ಕರೆ ಹಾಗೂ ಡೇಟಾ ಪ್ಲಾನ್ ಗಳು ಕೊನೆಗೊಳ್ಳಲಿವೆ ಎನ್ನಲಾಗುತ್ತಿದೆ.
ಏರ್ ಟೆಲ್ ಮುಖ್ಯಸ್ಥ ಸುನಿಲ್ ಮಿತ್ತಲ್ ಅವರು ಟ್ರಾಯ್ ಕಾರ್ಯದರ್ಶಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ಡೇಟಾಕ್ಕೆ ಕನಿಷ್ಠ ದರ ನಿಗದಿಪಡಿಸುವಂತೆ ಮಿತ್ತಲ್ ಟ್ರಾಯ್ ಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಸುನಿಲ್ ಮಿತ್ತಲ್ ಮನವಿಗೆ ಸ್ಪಂದಿಸಿರುವ ಟ್ರಾಯ್ ಈ ಬಗ್ಗೆ ಸೂರ್ಕತ ನಿರ್ಧಾರ ತೆಗೆದುಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದೆ ಎಂದು ಹೇಳಲಾಗುತ್ತಿದೆ.
ಹೀಗಾಗಿ ಉಚಿತವಾಗಿ ಫೋನ್ ಕರೆ ಹಾಗೂ ಡೇಟಾ ಪ್ಲಾನ್ ಗಳು ಬಳಕೆದಾರರಿಗೆ ಕೈತಪ್ಪುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.