Monday, November 25, 2024
ಸುದ್ದಿ

25 ಲಕ್ಷ ‘ಸಾಲದ ಆಸೆ’ಗೆ ಕೇರಳದ ಈಕೆ ಕಳೆದುಕೊಂಡಿದ್ದು ಬರೋಬ್ಬರಿ 3 ಲಕ್ಷ-ಕಹಳೆ ನ್ಯೂಸ್

ಬೆಂಗಳೂರು : ಇತ್ತೀಚಿಗೆ ವಿವಿಧ ರೀತಿಯಲ್ಲಿ ವಂಚನೆಯ ಜಾಲ ಶುರುವಾಗುತ್ತಿದೆ. ಸೈಬರ್ ವಂಚನೆಯ ಜೊತೆ ಜೊತೆಗೆ ಸಾಲ ಕೊಡಿಸುವುದಾಗಿ ನಂಬಿಸಿ, ಕಮಿಷನ್ ಆಸೆ ತೋರಿಸಿ ಪಡೆದು ವಂಚಿಸುತ್ತಿರುವವರ ಸಂಖ್ಯೆ ಕೂಡ ಹೆಚ್ಚುತ್ತಿದ್ದೆ. ಕೇರಳದ ಮಹಿಳೆಯೊಬ್ಬರ ಮೊಬೈಲ್ ಸಂಖ್ಯೆಗೆ ಸಾಲ ಕೊಡಿಸುವುದಾಗಿ ಜಾಹೀರಾತು ಸಂದೇಶ ಕಳುಹಿಸಿದ್ದ ಆರೋಪಿಗಳು, ಅದೂ ಇದು ಎಂದು ಹೇಳಿ 3 ಲಕ್ಷ ಹಣ ಪಡೆದು ವಂಚಿಸಿ, ಪರಾರಿಯಾಗಿರುವ ಘಟನೆ ನಗರದಲ್ಲಿ ವರದಿಯಾಗಿದೆ.

ಕೇರಳ ಮೂಲಕ ಸುಮಾ ಎಂಬುವರ ಮೊಬೈಲ್ ಗೆ ಜಾಹೀರಾತು ಸಂದೇಶವೊಂದು ಬಂದಿತ್ತು. ತಾವು ಸಾಲ ಕೊಡಿಸುವುದಾಗಿ ಆ ಜಾಹೀರಾತು ಸಂದೇಶವಾಗಿತ್ತು. ಆ ಸಂಖ್ಯೆಗೆ ಕರೆ ಮಾಡಿದ್ದ ಸುಮಾ ಎಂಬುವರು ನಮಗೆ 50 ಲಕ್ಷ ರೂಪಾಯಿ ಸಾಲ ಬೇಕಿದೆ ಕೊಡಿಸುತ್ತೀರ ಎಂಬುದಾಗಿ ವಂಚಕರನ್ನು ಕೇಳಿದ್ದಳು. ಓಕೆ.. ನಾವ್ ಕೊಡಿಸ್ತೀವಿ.. ಡೋಂಟ್ ವರಿ ಎಂಬುದಾಗಿ ಮಾತಿನ ಮೋಡಿಯಲ್ಲಿ ವ್ಯವಹಾರ ಕುದುರಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಎರಡು ದಿನ ಬಿಟ್ಟು ಸುಮಾ ಅವರಿಗೆ ಕರೆ ಮಾಡಿದ್ದ ಆರೋಪಿಗಳು, ನೀವು ಕೇಳಿದ 50 ಲಕ್ಷ ಸಾಲ ಮಂಜೂರಾಗಿದೆ. ಬೆಂಗಳೂರಿಗೆ ಬಂದು ಪಡೆದುಕೊಂಡು ಹೋಗಿ ಎಂಬುದಾಗಿ ಹೇಳಿದ್ದರು. ವಂಚಕರ ಮಾತು ನಂಬಿ ನಗರಕ್ಕೆ ಬಂದಿದ್ದ ಸುಮಾ, ಎಂ ಜಿ ರಸ್ತೆಯ ಕಾಫೀ ಡೇ ನಲ್ಲಿ ಮಾತಕತೆ ಮಾಡುವ ಸಂದರ್ಭದಲ್ಲಿ ಚಾಪಾಕಾಗದ ವೆಚ್ಚವೆಂಬಂತೆ 3 ಲಕ್ಷ ನೀಡಬೇಕಾಗುತ್ತದೆ ಎಂದು ತಿಳಿಸಿದ್ದರು. ಆರೋಪಿಗಳ ಮಾತಿಗೆ ಒಪ್ಪಿ ಸುಮಾ 3 ಲಕ್ಷ ನೀಡಿದ್ದರು. ಹೀಗೆ ಹಣ ಪಡೆದಿದ್ದೇ ತಡ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಅತ್ತ ಪೋನ್ ಮಾಡಿದ್ರೇ ಸ್ವಿಚ್ ಆಫ್. ಇತ್ತ 3 ಲಕ್ಷ ಹಣವನ್ನೂ ಕಳೆದುಕೊಂಡಿದ್ದಾರೆ. ಈ ಸಂಬಂಧ ಅಶೋಕ್ ನಗರ ಪೊಲೀಸ್ ಠಾಣೆಗೆ ದೂರು ನೀಡಿ ಆರೋಪಿಗಳನ್ನು ಪತ್ತೆ ಮಾಡಿ, ಹಣ ಕೊಡಿಸುವಂತೆ ಮನವಿ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು