Recent Posts

Monday, November 25, 2024
ಸುದ್ದಿ

ಹೈದ್ರಾಬಾದ್ ಸಾಮೂಹಿಕ ಅತ್ಯಾಚಾರ ಪ್ರಕರಣ: ಪಶು ವೈದ್ಯೆ DNA ವರದಿಯಲ್ಲೇನಿದೆ.-ಕಹಳೆ ನ್ಯೂಸ್

ತೆಲಂಗಾಣದ ರಾಜಧಾನಿ ಹೈದ್ರಾಬಾದ್ ನಲ್ಲಿ ವೈದ್ಯೆ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದು ಬೆಂಕಿ ಹಚ್ಚಿದ್ದ ಪ್ರಕರಣ ಇಡೀ ದೇಶವನ್ನು ಬೆಚ್ಚಿ ಬೀಳಿಸಿತ್ತು. ಸಾಮೂಹಿಕ ಅತ್ಯಾಚಾರವೆಸಗಿದ್ದ ಆರೋಪಿಗಳನ್ನು ಘಟನೆ ನಡೆದ 9ನೇ ದಿನ ಎನ್ ಕೌಂಟರ್ ಮಾಡಲಾಗಿತ್ತು. ಈ ಬಗ್ಗೆ ಅನೇಕ ಪ್ರಶ್ನೆಗಳು ಎದ್ದಿದ್ದವು. ಈಗ ಶವದ ಡಿ ಎನ್ ಎ ವರದಿ ಬಂದಿದೆ. ಡಿ ಎನ್ ಎ ವರದಿ ವೈದ್ಯೆ ಕುಟುಂಬಸ್ಥರಿಗೆ ಹೊಂದಿಕೆಯಾಗ್ತಿದೆ.

ಗುರುವಾರ ಪಶು ವೈದ್ಯೆಯ ಡಿಎನ್‌ಎ ವರದಿ ಬಂದಿದೆ. ವರದಿಯ ನಂತರ ಸುಟ್ಟ ದೇಹವು ವೈದ್ಯೆಯದ್ದು ಎಂಬುದು ಸಾಬೀತಾಗಿದೆ. ಅವರ ಕುಟುಂಬ ಸದಸ್ಯರಿಗೆ ಇದು ಹೊಂದಿಕೆಯಾಗಿದೆ. ಘಟನಾ ಸ್ಥಳದಲ್ಲಿ ಸಿಕ್ಕ Seminal Stains ನಾಲ್ವರು ಆರೋಪಿಗಳದ್ದು ಎಂದು ವರದಿ ಹೇಳಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವೈದ್ಯೆಯ ಮೂಳೆಗಳನ್ನು ಡಿಎನ್‌ಎ ಪರೀಕ್ಷೆಗೆ ಕಳುಹಿಸಲಾಗಿತ್ತು. ವೈದ್ಯೆ ಬಟ್ಟೆಯಿಂದ ಸೆಮಿನಲ್ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ. ತನಿಖಾ ಅಧಿಕಾರಿಗಳು ಇನ್ನೂ ಕೆಲವು ವರದಿಗಾಗಿ ಕಾಯುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು