Recent Posts

Tuesday, November 26, 2024
ರಾಜಕೀಯ

ಮಹಾರಾಷ್ಟ್ರ ಸರ್ಕಾರಿ ಜಾಹೀರಾತಿನಲ್ಲಿ ಪ್ರಧಾನಿ ‌ಮೋದಿ ಫೋಟೋಗೆ ಕೊಕ್-ಕಹಳೆ ನ್ಯೂಸ್

ರಾಜಕೀಯದಲ್ಲಿ ವಿರೋಧ ಸಹಜ. ಆದರೆ ದೇಶದ ಪ್ರಧಾನಮಂತ್ರಿಯನ್ನೇ ಸರ್ಕಾರದ ಜಾಹೀರಾತಿನಿಂದ ಹೊರಗಿಡುವ ಮೂಲಕ ಮಹಾರಾಷ್ಟ್ರ ಸರ್ಕಾರ ವಿವಾದಕ್ಕೆ ಸಿಲುಕಿದೆ.

ಮಹಾರಾಷ್ಟ್ರದಲ್ಲಿ ಶಿವಸೇನಾ, ಎನ್ಸಿಪಿ ಮತ್ತು ಕಾಂಗ್ರೆಸ್ ಮೈತ್ರಿ ಕೂಟದ ಮಹಾ ವಿಕಾಸ್ ಅಘಾಡಿ ಸರ್ಕಾರ ರಚನೆಯ ಬಳಿಕ ನೀಡುತ್ತಿರುವ ಜಾಹೀರಾತುಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಉದ್ದೇಶಪೂರ್ವಕವಾಗಿ ಕೈ ಬಿಡಲಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಪ್ರಸಾದ್ ಲಾಡ್ ಆರೋಪಿಸಿದ್ದು ಈ ಸಂಬಂಧ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸುಪ್ರೀಂ ಕೋರ್ಟ್ ಮಾರ್ಗದರ್ಶಿ ಈ ಬಗ್ಗೆ ಸ್ಪಷ್ಟವಾಗಿ ಹೇಳಿದೆ. ಸರ್ಕಾರಿ ಜಾಹೀರಾತುಗಳಲ್ಲಿ ಕಡ್ಡಾಯವಾಗಿ ಪ್ರಧಾನಮಂತ್ರಿ ಭಾವಚಿತ್ರ ಪ್ರಕಟಿಸಬೇಕು. ಆದರೆ ಅಘಾಡಿ ಸರ್ಕಾರದ ಬಹುತೇಕ ಜಾಹೀರಾತುಗಳಲ್ಲಿ ಇದು ಪಾಲನೆಯಾಗುತ್ತಿಲ್ಲ. ಹಾಗಾಗಿ ತಕ್ಷಣವೇ ಗಮನಹರಿಸಿ ಮುಂದಿನ ‌ಎಲ್ಲಾ ಸರ್ಕಾರಿ ಜಾಹೀರಾತುಗಳಲ್ಲಿ ಪ್ರಧಾನಿ ಮೋದಿ ಅವರ ಭಾವಚಿತ್ರ ಅಳವಡಿಸಲು ಕ್ರಮ ಕೈಗೊಳ್ಳಲು ಸಿಎಂ ಠಾಕ್ರೆಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸರ್ಕಾರದ ಜಾಹೀರಾತುಗಳಲ್ಲಿ ಪ್ರಧಾನಿ, ರಾಷ್ಟ್ರಪತಿ ಮತ್ತು ರಾಜ್ಯಪಾಲರ ಜತೆ ಮುಖ್ಯ ಮಂತ್ರಿ ಭಾವಚಿತ್ರ ಬಳಸಲು ಸುಪ್ರೀಂ ಅನುಮತಿ ನೀಡಿದೆ ಎಂದು ಲಾಡ್ ಹೇಳಿದ್ದಾರೆ.