ಹೋಟೆಲ್ ಬಂಗುಡೆ ಸಸ್ಯಹಾರಿ ಮತ್ತು ಮಾಂಸಹಾರಿ ಫ್ಯಾಮಿಲಿ ರೆಸ್ಟೋರೆಂಟ್ ಪಕ್ಕಾ ತುಳುನಾಡ ಶೈಲಿ ಇದರ ಶುಭಾರಂಭವು ಇಂದು ಕಲ್ಲೇಗ ಜುಮ್ಮಾ ಮಸೀದಿಯ ಎದುರುಗಡೆ ಇರುವ ಮಸೀದಿಯ ಕಟ್ಟಡದಲ್ಲಿ ನಡೆಯಿತು. ಪುತ್ತೂರು ಶಾಸಕ ಸಂಜೀವ ಮಠಂದೂರು ನೂತನ ಹೋಟೆಲ್‍ನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಪುತ್ತೂರು ಕ್ಯಾಂಪ್ಕೋ ನಿರ್ದೇಶಕರಾದ ಚನಿಲ ತಿಮ್ಮಪ್ಪ ಶೆಟ್ಟಿ, ಕಲ್ಲೇಗ ಜುಮ್ಮಾ ಮಸೀದಿ ಕಾರ್ಯದರ್ಶಿ ಅಶ್ರಫ್ ಕಲ್ಲೇಗ ಹಾಗೂ ಅಮೀನ್ ಯಂಗ್ ಮೆನ್ಸ್ ಎಸೋಶಿಯೇಷನ್ಸ್ ಕಲ್ಲೇಗ ಅಧ್ಯಕ್ಷರು ಅಬ್ದುಲ್ ರಶೀದ್ ಸೇರಿದಂತೆ ಉಪಸ್ಥಿತರಿದ್ದರು.
ಮಧ್ಯಾಹ್ನ: ಮದ್ಯಾಹ್ನ ಸಂಪೂರ್ಣ ತೆಂಗಿನ ಎಣ್ಣೆಯಿಂದ ತಯಾರಿಸಿದ ಮೀನು ತವಾ ಫ್ರೈ, ಚಿಕನ್ ಸುಕ್ಕಾ, ಚಿಕನ್ ಪುಳಿ ಮುಂಚಿ, ಮೀನು ಪುಳಿ ಮುಂಚಿ, ಸ್ಪೇಷಲ್ ಮಡ್ಕಾ ಬಿರಿಯಾನಿ, ಮರುವಾಯಿ ಸುಕ್ಕಾ, ಬೊಂಡಾಸ್ ಘೀ ರೋಸ್ಟ್, ಚಿಕನ್‍ಗೆ ಸಂಬಂಧ ಪಟ್ಟಂತ ಹಲವಾರು ವಿಶಿಷ್ಟ ಖಾದ್ಯಗಳು ಮತ್ತು ಜ್ಯೂಸ್ ಐಸ್ ಕ್ರೀಮ್‍ಗಳು ಲಭ್ಯವಿರುತ್ತದೆ.
ಸಂಜೆ: ಚೈನೀಸ್ ಐಟಂಗಳು, ನೂಡಲ್ಸ್, ಚಿಕನ್ ಫ್ರೈಡ್ ರೈಸ್, ಗೋಬಿ, ಮಶ್ರೂಮ್, ಚಿಕನ್ ಸೂಪ್, ಚಿಕನ್ ಟಿಕ್ಕಾ, ಚಿಕನ್ ಅಲ್ಫಾಂ, ಶವರ್ಮ ಚಿಕನ್ ಬ್ರೂಸ್ಟಡ್ ಹಾಗೂ ಬಿಸಿ ಬಿಸಿ ಸ್ವತಃ ತಯಾರಿಸಿದ ನೀರ್ ದೋಸೆ, ಪರೋಟ, ಅಕ್ಕಿ ರೊಟ್ಟಿ, ಸೇಮಿಗೆ, ಬಾರೆದ ಇರೆತ ಅಡ್ಯೆ, ಪುಂಡಿ ಇನ್ನನು ಹಲವಾರು ಬಗೆಯ ಖಾದ್ಯಗಳು ಲಭ್ಯ.
ಬಂಗುಡೆ ಹೋಟೆಲ್‍ನ ವಿಶೇಷತೆಗಳು:
ಪಕ್ಕಾ ತುಳುನಾಡ ಶೈಲಿಯಲ್ಲಿ ಪ್ರಾಚೀನ ಕಾಲದಲ್ಲಿ ನೀರು ಕುಡಿಯಲು ಬಳಸುತ್ತಿದ್ದ ತಾಮ್ರದ ಲೋಟಗಳನ್ನು ನಮ್ಮಲ್ಲಿ ಬಳಸಲಾಗುವುದು ಹಾಗೂ ಚಿಕನ್ ಮತ್ತು ಮೀನಿನ ಪದಾರ್ಥಗಳನ್ನು ಮಣ್ಣಿನ ಪಾತ್ರೆಯಲ್ಲಿ ತಯಾರಿಸಲಾಗುತ್ತದೆ.
ಎಲ್ಲಾ ಸಭೆ ಸಮಾರಂಭಗಳಿಗೆ ನುರಿತ ಕೆಲಸಗಾರರಿಂದ ಕ್ಯಾಟರಿಂಗ್ ಮಾಡಿಕೊಡಲಾಗುವುದು.
ಪಾರ್ಸೆಲ್ ಹೋಂ ಡೆಲಿವರಿ ವ್ಯವಸ್ಥೆಗಳು ಇದೆ.