Tuesday, November 26, 2024
ಸುದ್ದಿ

2019 ಗೂಗಲ್ ಸರ್ಚ್: ವಿಂಗ್ ಕಮ್ಯಾಂಡರ್ ಅಭಿನಂದನ್ ಹೆಚ್ಚು ಹುಡುಕಾಟ- ಕಹಳೆ ನ್ಯೂಸ್

2020 ವರ್ಷಾರಂಭಕ್ಕೂ ಮುನ್ನ, 2019ನೇ ಸಾಲಿನಲ್ಲಿ ಯಾವ ವ್ಯಕ್ತಿಯ ಬಗ್ಗೆ ಭಾರತದಲ್ಲಿ ಅತಿ ಹೆಚ್ಚು ಹುಡುಕಾಟ ನಡೆಸಲಾಯಿತು ಎಂಬುದನ್ನು ಸರ್ಚ್ ಇಂಜಿನ್ ದೈತ್ಯ ಗೂಗಲ್ ಬಹಿರಂಗಪಡಿಸಿದೆ.

ಈ ವರ್ಷದಲ್ಲಿ ಗೂಗಲ್ ನಲ್ಲಿ ಅತಿ ಹೆಚ್ಚು ಹುಡುಕಾಟಕ್ಕೆ ಒಳಗಾದ ವ್ಯಕ್ತಿಗಳ ಟಾಪ್ 10 ಪಟ್ಟಿಯಲ್ಲಿ ಭಾರತೀಯ ವಾಯುಸೇನೆಯ ವಿಂಗ್ ಕಮ್ಯಾಂಡರ್ ಅಭಿನಂದನ್ ವರ್ಧಮಾನ್ ಹೆಸರು ಅಗ್ರಸ್ಥಾನ ಪಡೆದುಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಿಕ್ಕಂತೆ ನಂತರದ ಸ್ಥಾನದಲ್ಲಿ ಲತಾಮಂಗೇಶ್ಕರ್, ಯುವರಾಜ್ ಸಿಂಗ್ ಇದ್ದಾರೆ. ಮುರ್ನಾಲ್ಕು ಮಂದಿ ಬಿಟ್ಟರೆ ಮಿಕ್ಕವರೆಲ್ಲರೂ ಸಿನಿಮಾ, ಸಂಗೀತ ಕ್ಷೇತ್ರಕ್ಕೆ ಸಂಬಂಧಿಸಿದ ಸೆಲೆಬ್ರಿಟಿಗಳಾಗಿರುವುದು ವಿಶೇಷ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಪಟ್ಟಿಯಲ್ಲಿ ಆನಂದಕುಮಾರ್ ಎಂಬ ಹೆಸರು ನಾಲ್ಕನೇ ಸ್ಥಾನದಲ್ಲಿದೆ. ಇವರ ಜೀವನಗಾಥೆಯನ್ನು ಸೂಪರ್ 30 ಎಂಬ ಸಿನಿಮಾ ಕೂಡಾ ಇತ್ತೀಚೆಗೆ ಮಾಡಲಾಗಿದೆ.

ಟಾಪ್ 10 ಹೆಚ್ಚು ಸರ್ಚ್ ಆಗಿರುವ ವ್ಯಕ್ತಿಗಳು

1. ಅಭಿನಂದನ್ ವರ್ಧಮಾನ್.

2. ಲತಾ ಮಂಗೇಶ್ಕರ್

3.ಯುವರಾಜ್ ಸಿಂಗ್

4. ಆನಂದ್ ಕುಮಾರ್

5. ವಿಕ್ಕಿ ಕೌಶಲ್.

6. ರಿಷಬ್ ಪಂತ್

7. ರಾನು ಮೊಂಡಲ್

8. ತಾರಾ ಸುತಾರಿಯಾ

9. ಸಿದ್ದಾರ್ಥ್ ಶುಕ್ಲಾ

10. ಕೊಯಿನಾ ಮಿತ್ರಾ