ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ದಿನಾಂಕ 21, 22,23 ಫೆಬ್ರವರಿ 2019ರಂಂದು ಮೂರು ದಿನಗಳ ಕಾಲ ನಡೆಯಲಿರುವ
ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಫರ್ಧೆಯ ಕರಪತ್ರ ಬಿಡುಗಡೆ ಕಾರ್ಯಕ್ರಮವು ದಿನಾಂಕ 13-12-2019ರಂದು ಕಾನೂನು ಮಹಾವಿದ್ಯಾಲಯದಲ್ಲಿ ನಡೆಯಿತು.
ಕಾನೂನು ಕಾಲೇಜಿನ ಅಧ್ಯಯನ ವಿಭಾಗದ ನಿರ್ದೇಶಕರಾದ ಡಾ. ಬಿ. ಕೆ.ರವೀಂದ್ರ ಕರಪತ್ರವನ್ನು ಬಿಡುಗಡೆಗೊಳಿಸಿ,
ಮೂರು ದಿನಗಳ ಕಾಲ ನಡೆಯಲಿರುವ ಈ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಫರ್ಧೆಯಲ್ಲಿ ಭಾರತದ ಹಲವು ಪ್ರತಿಷ್ಠಿತ
ಕಾನೂನು ಕಾಲೇಜುಗಳ 30ಕ್ಕೂ ಅಧಿಕ ತಂಡಗಳು ಭಾಗವಹಿಸುವ ನಿರೀಕ್ಷೆಇದೆಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಅಕ್ಷತಾ ಎ. ಪಿ., ಕಾರ್ಯಕ್ರಮದ ಸಂಯೋಜಕರಾದ ಉಪನ್ಯಾಸಕಿ ಕುಮಾರಿ ಶ್ರೀ ರಕ್ಷಾ ಮತ್ತು ಹಿತಾ ದೇಚಮ್ಮ, ಹಾಗೂ ಉಪನ್ಯಾಸಕರಾದ ಶ್ರೀಮತಿ ಸಂಗೀತಾ ಎಸ್. ಎಂ., ಶ್ರೀ ಸುಭಾಷಿಣಿ ಜೆ., ಶ್ರೀ ಕುಮಾರ್. ಎಸ್., ಡಾ. ರೇಖಾ ಕೆ., ವಿದ್ಯಾರ್ಥಿ ಸಂಯೋಜಕರಾದ ದಿವಿನ್ ವರ್ಮ ಮತ್ತು ಸಜಿನಿ ಮೋಹನ್ ಉಪಸ್ಥಿತರಿದ್ದರು.