Friday, September 20, 2024
ಸುದ್ದಿ

ಕೊಟ್ಟ ಮಾತನ್ನು ಉಳಿಸಿಕೊಂಡ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ – ಕಹಳೆ ನ್ಯೂಸ್

ಸುರತ್ಕಲ್ : ಕಳೆದ ಒಂದು ತಿಂಗಳ ಹಿಂದೆ ದಕ್ಷಿಣ ಕನ್ನಡ ಹೊತ್ತಿ ಉರಿದಿತ್ತು. ಹಿಂದೂ ಸಂಘಟನೆಯ ಕಾರ್ಯಕರ್ತ ದೀಪಕ್ ರಾವ್ ನನ್ನು ಜಿಹಾದಿಗಳು ಕೊಚ್ಚಿ ಕೊಲೆ ಮಾಡಿದ್ದರು‌. ಈ ಘಟನೆಯ ವಿರುದ್ಧ ದೇಶದ ಹಲವೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲವಾಗಿ ಭಯೋತ್ಪಾದನಾ ಸಂಘಟನೆಗಳನ್ನ ಪರೋಕ್ಷ ಬೆಂಬಲ ನೀಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಎಲ್ಲೆಡೆ ಭಾರೀ ಪ್ರತಿಭಟನೆ ನಡೆಸಲಾಗಿತ್ತು.

ಆತನದ್ದು ಬಡ ಕುಟುಂಬ..

ಜಾಹೀರಾತು
ಜಾಹೀರಾತು
ಜಾಹೀರಾತು

ದೀಪಕ್ ರಾವ್ ರಾಷ್ಟ್ರ ಪ್ರೇಮವನ್ನ ಬೆಳೆಸಿಕೊಂಡು ಸ್ವಾಭಿಮಾನದಿಂದ ಬದುಕುತ್ತಿದ್ದ ಯುವಕ. ಎಂದಿಗೂ ಯಾರ ತಂಟೆಗೂ ಹೋದವನಲ್ಲ. ಆತ ಮಾಡಿದ್ದ ಒಂದೇ ಒಂದು ತಪ್ಪೆಂದರೇ ಹಿಂದೂಗಳ ಪರ ಧ್ವನಿ ಎತ್ತಿದ್ದು. ಹಾಗಾಗಿಯೇ ಮತಾಂಧ ಜಿಹಾದಿಗಳಿಂದ ಟಾರ್ಗೆಟ್ ಆಗಿದ್ದ. ತಂದೆ ಇಲ್ಲದಿದ್ದರೂ ದುಡಿದು ತನ್ನ ತಾಯಿ ಹಾಗು ಮೂಕ ಸಹೋದರನನ್ನ ಸಾಕುತ್ತಿದ್ದ ದೀಪಕ್ ರಾವ್..

ಜಾಹೀರಾತು

ಮಿಡಿದ ಕರುನಾಡು, ಒಗ್ಗೂಡಿದ ಹಿಂದೂಗಳು..

ಹಿಂದೂಗಳ ಆಕ್ರೋಶದ ಕಟ್ಟೆ ಒಡೆದು ಹೋಗಿತ್ತು. ಎಲ್ಲೆಡೆ ಭಾರೀ ಪ್ರತಿಭಟನೆ ವ್ಯಕ್ತವಾಗಿತ್ತು. ದೀಪಕ್ ರಾವ್ ಕುಟುಂಬಕ್ಕೆ ಹಣ ಸಹಾಯ ಮಾಡಲು ಬಂದ ಸ್ಥಳೀಯ ಶಾಸಕರನ್ನ ಧಿಕ್ಕಾರ ಕೂಗಿ ವಾಪಾಸು ಕಳುಹಿಸಲಾಗಿತ್ತು. ತಕ್ಷಣವೇ ಸಾಮಾಜಿಕ ಜಾಲತಾಣಗಳಲ್ಲಿ ಆತನ ಕುಟುಂಬದ ಸ್ಥಿತಿಯನ್ನ ಅನಾವರಣ ಮಾಡಲಾಗಿತ್ತು. ಅವರ ತಾಯಿಯ ಬ್ಯಾಂಕ್ ಅಕೌಂಟ್ ಅನ್ನೂ ಶೇರ್ ಮಾಡಲಾಗಿತ್ತು. ಹಿಂದೂ ಸಮಾಜ ತನ್ನ ಯುವಕನ ಕುಟುಂಬದ ರಕ್ಷಣೆಗೆ ಧಾವಿಸಿತ್ತು. ಕೇವಲ 48 ಗಂಟೆಗಳಲ್ಲಿ ಬರೋಬ್ಬರಿ 35 ಲಕ್ಷಕ್ಕೂ ಅಧಿಕ ಹಣ ಸಂಗ್ರಹಿಸಲಾಗಿತ್ತು.

ದೀಪಕ್ ರಾವ್ ಮನೆಗೆ ಭೇಟಿ ನೀಡಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ…

ಅಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಯವರು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ರೊಂದಿಗೆ ಜಿಹಾದಿಗಳಿಂದ ಹತ್ಯೆಯಾದ ದೀಪಕ್ ರಾವ್ ಮನೆಗೆ ಭೇಟಿ ನೀಡಿ ಮಗನನ್ನು ಕಳೆದುಕೊಂಡ ತಾಯಿಯ ಕ್ಷೇಮ ವಿಚಾರಿಸಿದ್ದರು. ಇದೇ ಸಂದರ್ಭ ಆದ ದುರ್ಘಟನೆಗೆ ಮರುಗಿದ್ದ ಕೇಂದ್ರ ಸಚಿವರು ದೀಪಕ್ ರಾವ್ ರ ಸಹೋದರನಿಗೆ ಕೆಲಸ ಕೊಡಿಸುವ ಭರವಸೆ ನೀಡಿದ್ದರು. ಕೇವಲ ಇತರ ರಾಜಕಾರಣಿಗಳಂತೆ ಭರವಸೆ ಕೊಟ್ಟು ಓಡಿ ಹೋಗಿಲ್ಲ. ತಾನು ನೀಡಿದ ಭರವಸೆಯನ್ನು ಇಂದು ಈಡೇರಿಸಿದ್ದಾರೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಕುದುರೆಮುಖದ ಅದಿರು ಕಂಪೆನಿಯಿಂದ ದೀಪಕ್ ರಾವ್ ಸಹೋದರ ಸತೀಶ್ ಗೆ ಕೆಲಸಕ್ಕೆ ಆಫರ್ ಬಂದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಸತೀಶ್ ಸರ್ಕಾರಿ ಉದ್ಯೋಗಕ್ಕೆ ತೆರಳಲಿದ್ದಾರೆ.

ರಾಜ್ಯದ ಹಿಂದೂಗಳ ಧ್ವನಿ ಅನಂತ್..

ಅನಂತ್ ಕುಮಾರ್ ಹೆಗಡೆಯವರು ಕೇವಲ ಸಚಿವರು, ಸಂಸದರಷ್ಟೇ ಅಲ್ಲ. ಅವರು ರಾಜ್ಯದ ಹಿಂದೂಗಳ ಧ್ವನಿಯಾಗಿ ನಿಂತಿದ್ದಾರೆ. ಹಿಂದೂಗಳು ಹಾಗೂ ಹಿಂದೂ ಧರ್ಮದವರ ಬಗ್ಗೆ ಕೆಟ್ಟದಾಗಿ ಮಾತನಾಡುವವರ ವಿರುದ್ಧ ಕಿಡಿಕಾರುತ್ತಿದ್ದಾರೆ. ಇಷ್ಟು ದಿನ ಎಡಬಿಡಂಗಿಗಳು ಆಡಿದ್ದೇ ಆಟ ಎನ್ನುವ ಹಾಗಿತ್ತು. ಈಗ ಅವರುಗಳಿಗೆ ಸಮರ್ಥ ಉತ್ತರ ನೀಡುವ ನಾಯಕನೊಬ್ಬ ಸಿಕ್ಕಿದ್ದಾರೆ. ಹಾಗಾಗಿ ಅನಂತ್ ರಿಗೆ ರಾಜ್ಯದೆಲ್ಲೆಡೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಯುವಕರ ಕಣ್ಮಣಿಯಾಗಿ ಬೆಳೆಯುತ್ತಿದ್ದಾರೆ. ಇದೀಗ ದೀಪಕ್ ರಾವ್ ಕುಟುಂಬದ ಪರ ನಿಂತು, ಹಿಂದೂ ಕಾರ್ಯಕರ್ತರ ಜೊತೆ ತಾನಿದ್ದೇನೆ ಎಂಬುದನ್ನ ಮತ್ತೆ ಸಾಬೀತು ಪಡಿಸಿದ್ದಾರೆ.

ವರದಿ : ಕಹಳೆ ನ್ಯೂಸ್