ಬೆಂಗಳೂರು : ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ ಅನ್ವಯ ರಾಜ್ಯ ಧಾರ್ಮಿಕ ಪರಿಷತ್ ರಚಿಸಲಾಗಿದೆ.
ಧಾರ್ಮಿಕ ಪರಿಷತ್ ನ ನಾಮನಿರ್ದೇಶಿತ ಸದಸ್ಯರಾಗಿ ಆಗಮ ಪಂಡಿತರಾದ ದಕ್ಷಿಣಕನ್ನಡ ಜಿಲ್ಲೆ ಬಂಟ್ವಳ ತಾಲೂಕಿನ ಕೆ. ಸೂರ್ಯನಾರಾಯಣ ಕಶೆಕೋಡಿಯವರನ್ನು ನೇಮಕ ಮಾಡಲಾಗಿದೆ.
ಇವರ ಜೊತೆಗೆ ವೇದ ವಿದ್ವಾಂಸರಾದ ಮೈಸೂರು ಎಸ್. ಗೋವಿಂದ ಭಟ್, ಸದಸ್ಯರಾಗಿ ಸುಭಾಷ್ ಕಾಂಬ್ಳೆ, ರಾಮಚಂದ್ರ ಮಟ್ಟಿ, ವಿಜಯಲಕ್ಷಿ ಹಿರೇಮಠ್, ಡಾ|ಮಹರ್ಷಿ ಆನಂದ ಗುರೂಜಿ, ವೈ. ಎಸ್. ಸಿದ್ದಲಿಂಗ ಪ್ರಭು, ಅವರನ್ನು ನೇಮಿಸಲಾಗಿದೆ.
ಈ ನೇಮಕಾತಿಯು ನಾಲ್ಕು ವರ್ಷಗಳವರೆಗೆ ಅಥವಾ ಮುಂದಿನ ಆದೇಶದ ವರೆಗೆ ಜಾರಿಯಲ್ಲಿರುತ್ತದೆ.