ಪುತ್ತೂರು: ಮಂಗಳೂರು ಲಿಟರರಿ ಫೌಂಡೇಶನ್ ಇದರ ಎರಡನೆಯ ಆವೃತ್ತಿಯ ಮಂಗಳೂರು ‘ಲಿಟ್ ಫೆಸ್ಟ್ 2019’ ಇದರ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಗಾಗಿ ‘ದಿ ಐಡಿಯಾ ಆಫ್ ಭಾರತ್-ಟುಡೇ ಆಂಡ್ ಟುಮಾರೋ’ (‘ಭಾರತವೆಂಬ ಪರಿಕಲ್ಪನೆ-ಇಂದು ಮತ್ತು ನಾಳೆ’) ಎಂಬ ವಿಷಯದ ಕುರಿತು ಆಯೋಜಿಸಲಾದ ಇಂಗ್ಲೀಷ್ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿನಿ ಶ್ರೀದೇವಿ ಕೆ ಪ್ರಥಮ ಸ್ಥಾನ ಗಳಿಸಿರುತ್ತಾರೆ.
ಮಂಗಳೂರು ರಾಮಕೃಷ್ಣ ಮಿಷನ್‍ನ ಅಧ್ಯಕ್ಷ ಸ್ವಾಮಿ ಜಿತಕಾಮನಂದಜೀ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ವೇದಿಕೆಯಲ್ಲಿ ಕಾರ್ಯಕ್ರಮ ಸಂಯೋಜಕ ಕ್ಯಾ| ಗಣೇಶ್ ಕಾರ್ಣಿಕ್ ಉಪಸ್ತಿತರಿದ್ದರು.
ಪ್ರಶಸ್ತಿ ವಿಜೇತೆ ಶ್ರೀದೇವಿ ಇವರು ಕಲ್ಲಾರೆ ನಿವಾಸಿ ಮಹಾಬಲ ಭಟ್ ಮತ್ತು ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೇಮಲತಾ ಕೆ ದಂಪತಿಗಳ ಸುಪುತ್ರಿ.