Thursday, November 28, 2024
ಸುದ್ದಿ

ಬಂಟ್ವಾಳ ಗ್ರಾಮ ಪಂಚಾಯತ್ ಅಧ್ಯಕ್ಷ ಅವರ ಕೊಲೆಗೆ ಸ್ವಂತ ಅಣ್ಣನಿಂದಲೇ ಸ್ಕೆಚ್-ಕಹಳೆ ನ್ಯೂಸ್

ಬಂಟ್ವಾಳ: ಬಂಟ್ವಾಳ ತಾಲೂಕಿನ ಇರಾ ಗ್ರಾ.ಪಂ.ಅಧ್ಯಕ್ಷ ರಝಾಕ್ ಕುಕ್ಕಾಜೆ ಅವರ ಕೊಲೆ ಯತ್ನಕ್ಕೆ ರಝಾಕ್ ಅವರ ಸ್ವಂತ ಅಣ್ಣಾ ಹಾಗೂ ಇನ್ನೊರ್ವ ರಕ್ತ ಸಂಬಂಧಿ ಇಬ್ಬರು ಸೇರಿ ಸ್ಕೆಚ್ ಹಾಕಿದ್ದರು ಎಂಬ ಮಾಹಿತಿ ಲಭ್ಯವಾಗಿ ಅವರಿಬ್ಬರನ್ನು ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್ ನೇತೃತ್ವ ಎಸ್.ಐ.ಪ್ರಸನ್ನ ಅವರ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಕುಂಜುಮೋನು ಹಾಗೂ ಮಸೀದಿ ಮಾಜಿ ಆದ್ಯಕ್ಷ ತೋಟ ಅಬುಬಕ್ಕರ್ ಬಂಧಿತ ಆರೋಪಿಗಳು.
ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ರಝಾಕ್ ಕುಕ್ಕಾಜೆ ಅವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಾದ ಮಂಚಿ ನಿವಾಸಿಗಳಾದ ಬಶಿರ್, ಕಬೀರ್, ತನ್ವಿರ್, ಪೊಲೀಸರು ಬಂಧಿಸಿ, ಕಳೆದ ಎರಡು ದಿನಗಳ ಹಿಂದೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅದರೆ ಅವರ ಬಂಧಿಸಿ ವಿಚಾರಣೆಯ ಮಹತ್ವದ ವಿಚಾರವೊಂದನ್ನು ಬಾಯಿಬಿಟ್ಟಿದ್ದ ಕಾರಣ ಮತ್ತಿಬ್ಬರು ಆರೋಪಿಗಳನ್ನುಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ರಝಾಕ್ ಕುಕ್ಕಾಜೆ ಅವರ ಸ್ವಂತ ಅಣ್ಣಾ ಕುಂಜುಮೋನು ಹಾಗೂ ಮಸೀದಿ ಮಾಜಿ ಆದ್ಯಕ್ಷ ರಝಾಕ್ ಅವರ ಸಂಬಂಧಿ ತೋಟ ಅಬುಬಕರ್ ಅವರನ್ನು ಪೆÇಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಘಟನೆಯ ವಿವರ:
ನ. 30ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮಂಚಿ ಕಟ್ಟೆಯ ಬಳಿ ಇರಾ ಗ್ರಾಮ ಪಂಚಾಯತಿ ಅಧ್ಯಕ್ಷ ರಜಾಕ್ ರವರ ಮೇಲೆ 3 ಜನ ಹಲ್ಲೆ ನಡೆಸಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಅ.ಕ್ರ 123/19 ಕಲಂ 307,324,109 ಡಿ/ತಿ 149 IPಅ ರಂತೆ ಪ್ರಕರಣ ದಾಖಲಾಗಿತ್ತು. ಆದರೆ ಪ್ರಕರಣ ನಡೆದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಗಳ ಪತ್ತೆಗೆ ಗ್ರಾಮಾಂತರ ಠಾಣಾ ಪೊಲೀಸರು ಬಲೆಬೀಸಿದ್ದರು.


ಪ್ರಕರಣ ನಡೆದು 11 ದಿನಗಳ ಬಳಿಕ ಪೊಲೀಸರು ಮೂವರು ಆರೋಪಿಗಳಾದ ಕುಕ್ಕಾಜೆ ಗ್ರಾಮದ ಬಶಿರ್, ಕಬೀರ್, ತನ್ವಿರ್ ಇವರನ್ನು ಡಿ. 11 ರಂದು ಬಂಧಿಸಿದ್ದು, ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಆದರೆ ವಿಚಾರಣೆಯ ವೇಳೆ ಬಂಧಿತ ಆರೋಪಿಗಳ ಮಾಹಿತಿಯಂತೆ ಮತ್ತಿಬ್ಬರು ಪ್ರಮುಖ ಸೂತ್ರದಾರಿ ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿದ್ದು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು