Friday, November 29, 2024
ಸುದ್ದಿ

ಭತ್ತದ ಚೀಲ ಕದ್ದು 36 ವರ್ಷಗಳಿಂದ ಎಸ್ಕೇಪ್ ಆಗಿದ್ದವ ಸಿಕ್ಕಿಬಿದ್ದ- ಕಹಳೆ ನ್ಯೂಸ್

ಧಾರವಾಡದಲ್ಲಿ 36 ವರ್ಷಗಳ ಹಿಂದೆ ನಡೆದಿದ್ದ ಪ್ರಕರಣವೊಂದನ್ನು ಭೇದಿಸುವಲ್ಲಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಭತ್ತದ ಚೀಲ ಕಳವು ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.

1983ರಲ್ಲಿ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದ ರೈತ ಮುತಾಲಿಕ ದೇಸಾಯಿ ಎಂಬುವರ ಕಣದಲ್ಲಿ ಭತ್ತದ ಚೀಲಗಳನ್ನು ಕಳ್ಳತನ ಮಾಡಲಾಗಿತ್ತು. 8 ಜನರ ತಂಡ ರೈತನ ಕಣಕ್ಕೆ ನುಗ್ಗಿ ಆತನನ್ನು ಕಟ್ಟಿ ಹಾಕಿ ಬೆಳಗಾಗುವವರೆಗೆ ಕಣದಲ್ಲಿದ್ದ ಭತ್ತದ ಹುಲ್ಲನ್ನು ಒಕ್ಕಣೆ ಮಾಡಿ 25 ಚೀಲ ಕಾಳು ಕಳವು ಮಾಡಿದ್ದರು. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ತನಿಖೆ ಕೈಗೊಂಡಿದ್ದ ಪೊಲೀಸರು, 7 ಜನ ಆರೋಪಿಗಳನ್ನು ಬಂಧಿಸಿದ್ದರು. ಆದರೆ 8ನೇ ಆರೋಪಿ ಎತ್ತಿನಗುಡ್ಡ ಗ್ರಾಮದ ಶಂಕ್ರಪ್ಪ ಮಹಾದೇವಪ್ಪ ಜೋಡಗೇರಿ ತಲೆಮರೆಸಿಕೊಂಡಿದ್ದ. ಬೇರೆ ಬೇರೆ ರಾಜ್ಯಗಳಲ್ಲಿ ಕೆಲಸ ಮಾಡಿ, ಕೆಲ ವರ್ಷಗಳ ಹಿಂದೆ ಸವದತ್ತಿ ತಾಲೂಕಿನ ಯಲ್ಲಮ್ಮನಗುಡ್ಡದಲ್ಲಿ ಆಶ್ರಯ ಪಡೆದಿದ್ದ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಳೆಯ ಪ್ರಕರಣ ಇತ್ಯರ್ಥಪಡಿಸುವಂತೆ ಎಸ್​ಪಿ ಎಲ್ಲ ಠಾಣೆಗಳ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು. 2 ತಿಂಗಳಿಂದ ಪೊಲೀಸರು ಆರೋಪಿ ಶಂಕ್ರಪ್ಪನ ಬೆನ್ನು ಬಿದ್ದಿದ್ದರು. ಶನಿವಾರ ಯಲ್ಲಮ್ಮನ ಗುಡ್ಡದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.