Saturday, November 23, 2024
ಸುದ್ದಿ

ಕೋಲ್ಕತ್ತಾದಲ್ಲಿ ಚಂದ್ರಮೌಳೀಶ್ವರ ದೇವರಿಗೆ ಶಿವರಾತ್ರಿಯ ವಿಶೇಷ ಪೂಜೆ ಸಲ್ಲಿಸದ ರಾಘವೇಶ್ವರ ಶ್ರೀ – ಕಹಳೆ ನ್ಯೂಸ್

 

ಕೋಲ್ಕತ್ತ : ಶಿವರಾತ್ರಿಯ ಶುಭದಿನದಂದು ಕೋಲ್ಕತ್ತಾದಲ್ಲಿ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಶ್ರೀಕರಾರ್ಚಿತ ಚಂದ್ರಮೌಳೀಶ್ವರ ದೇವರಿಗೆ ವಿಶೇಷ ಪೂಜೆ ನೆರವೇರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀಕರಾರ್ಚಿತ ಚಂದ್ರಮೌಳೀಶ್ವರ ದೇವರ ವಿಶೇಷ:

ಜಾಹೀರಾತು
ಜಾಹೀರಾತು
ಜಾಹೀರಾತು

ಶಂಕರಾಚಾರ್ಯರಯರು ಸುರೇಶ್ವರಾಚಾರ್ಯರ ಜೇಷ್ಠ ಶಿಷ್ಯ ವಿದ್ಯಾನಂದಾಚಾರ್ಯರಿಗೆ ನೀಡಿದ  ಚಂದ್ರಮೌಳೀಶ್ವರ ಲಿಂಗವು ಚಂದ್ರ ರೇಖೆಯನ್ನು ಹೊಂದಿದ್ದು, ಅನ್ವರ್ಥ ಚಂದ್ರಮೌಳೇಶ್ವರ ಲಿಂಗವಾಗಿದೆ.  ಚಂದ್ರನ ಗತಿಗೆ ತಕ್ಕಂತೆ, ಅಮಾವಾಸ್ಯೆ – ಹುಣ್ಣಿಮೆಗಳಿಗೆ ಲಿಂಗದ  ಬಣ್ಣ ಬದಲಾವಣೆಯಾಗುವುದು ಇದರ ವೈಶಿಷ್ಟ್ಯ.


ಚಂದ್ರಮೌಳೀಶ್ವರನ ಒಂದು ಭಾಗದಲ್ಲಿ ಒಳಗಿನಿಂದಲೇ ಆತ್ಮಲಿಂಗದ ಆಕಾರ ಮೂಡಿಬಂದಿರುವುದು ವಿಶೇಷವಾಗಿದ್ದು, ಶ್ರೀಕ್ಷೇತ್ಮರ ಗೋಕರ್ಣ ಹಾಗೂ ಶ್ರೀಮಠದ ಸಂಬಂಧದ  ಪ್ರತೀಕವಾಗಿದೆ.  ಇನ್ನೊಂದು ಭಾಗವು ಅಖಂಡ ಭಾರತದ ನಕಾಶೆಯನ್ನು ಹೋಲುತ್ತದೆ. ನಕಾಶೆಯ ಮಧ್ಯೆ ತ್ರಿಕೋನಾಕಾರವಿದೆ, ಅದರ ಒಳಗೆ ತ್ರಿಕೋನಗಳು, ಅದರ ಮಧ್ಯ ಬಿಳಿ ಬಿಂದುವಿದೆ. ತ್ರಿಕೋನ ಶಕ್ತಿಯ ಪ್ರತೀಕವಾಗಿದೆ ಹಾಗೂ ಬಿಂದು ಶಿವನ ಪ್ರತೀಕವಾಗಿದೆ.

ವರದಿ : ಕಹಳೆ ನ್ಯೂಸ್