Friday, November 29, 2024
ಸುದ್ದಿ

ಕೇವಲ 50 ಪೈಸೆ ಬಾಕಿಗಾಗಿ ನೋಟಿಸ್ ಕಳುಹಿಸಿದ ಬ್ಯಾಂಕ್-ಕಹಳೆ ನ್ಯೂಸ್

ಜೈಪುರ: 50 ಪೈಸೆ ಸಾಲ ಉಳಿಸಿಕೊಂಡಿದ್ದಕ್ಕಾಗಿ ಬ್ಯಾಂಕ್ ನೋಟಿಸ್ ಕಳುಹಿಸಿರುವ ಘಟನೆ ನೆ ರಾಜಸ್ಥಾನದ ಜುಂಜುನು ಜಿಲ್ಲೆಯ ಖೇಟ್ರಿ ಗ್ರಾಮದಲ್ಲಿ ನಡೆದಿದೆ.ಬಾಕಿ ಉಳಿದಿರುವ 50 ಪೈಸೆಯನ್ನು ಕಟ್ಟುವಂತೆ ಬ್ಯಾಂಕ್ ಜಿತೇಂದ್ರ ಸಿಂಗ್ ಎನ್ನುವವರ ಮನೆಗೆ ರಾತ್ರೋ ರಾತ್ರಿ ಬ್ಯಾಂಕ್‌ ನೋಟಿಸ್ ಅಂಟಿಸಿದೆ. ಇದೇ ವೇಳೆ ಬ್ಯಾಂಕ್‌ಗೆ ಪಾವತಿ ಮಾಡಬೇಕಾಗಿರುವ ಹಣವನ್ನು ನೀಡಲು ಹೋದರೆ ಬ್ಯಾಂಕ್‌ ನಿರಾಕರಿಸಿದೆ ಎನ್ನಲಾಗಿದೆ ಎನ್ನಲಾಗಿದೆ.

ಬೆನ್ನುಮೂಳೆಯ ಗಾಯದಿಂದ ಬಳಲುತ್ತಿರುವ ಸಿಂಗ್ ಅವರಿಗೆ ಖೇತ್ರಿಯ ಲೋಕ-ಅದಾಲತ್‌ಗೆ ಪಾವತಿಸಲು ಸಾಧ್ಯವಾಗಲಿಲ್ಲ. ಆದಾಗ್ಯೂ, ಅವರ ತಂದೆ ವಿನೋದ್ ಸಿಂಗ್ ಅವರ ಪರವಾಗಿ ಅಲ್ಲಿಗೆ ಹೋದಾಗ ಬ್ಯಾಂಕ್ ಅಧಿಕಾರಿಗಳು ಹಣವನ್ನು ಠೇವಣಿ ಮಾಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

‘ಬ್ಯಾಂಕ್ ಅಧಿಕಾರಿಗಳು 50 ಪೈಸೆಗಳಿಗೆ ನೋಟಿಸ್ ಕಳುಹಿಸಿದ್ದಾರೆ. ನನ್ನ ಕ್ಲೈಂಟ್ ಬ್ಯಾಂಕಿನಿಂದ ನೋ ಆಬ್ಜೆಕ್ಷನ್ ಸರ್ಟಿಫಿಕೇಟ್ (ಎನ್‌ಒಸಿ) ಪಡೆಯಲು ಅದನ್ನು ಠೇವಣಿ ಮಾಡಲು ಹೋದವೇಳೆಯಲ್ಲಿ ಹಣವನ್ನು ತೆಗೆದುಕೊಳ್ಳುವುದಕ್ಕೆ ಬ್ಯಾಂಕ್‌ ಅಧಿಕಾರಿಗಳು ನಿರಾಕರಣೆಮಾಡಿದ್ದು ಈ ಬಗ್ಗೆ ಬ್ಯಾಂಕ್‌ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಅಂತ ಜಿತೇಂದ್ರ ಸಿಂಗ್ ಪರ ವಕೀಲರು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು