Wednesday, January 22, 2025
ಸುದ್ದಿ

ವಿಕಲಚೇತನ’ನ ವರಿಸಿ ಎಲ್ಲರಿಗೂ ‘ಮಾದರಿ’ಯಾದ ಯುವತಿ-ನೀವು ಶುಭಾಶಯ ಕೋರಿ-ಕಹಳೆ ನ್ಯೂಸ್

ಧರ್ಮಸ್ಥಳ (ದಕ್ಷಿಣ ಕನ್ನಡ): ಅಪಘಾತವೊಂದರಲ್ಲಿ ಕಾಲು ಕಳೆದುಕೊಂಡಿದ್ದ ಯುವಕನನ್ನು ಮದುವೆಯಾಗುವ ಮೂಲಕ ಸಂಜೀವಿನಿ ಎಂಬ ಯುವತಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಕುದ್ರಾಡಿ ಚಂದ್ರಶೇಖರ ಎಂಬುವರು, ಒಂದೂವರೆ ವರ್ಷದ ಹಿಂದೆ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಒಂದು ಕಾಲನ್ನು ಕಳೆದು ಕೊಂಡಿದ್ದರು. ಇದರಿಂದ ಬಹಳ ನೊಂದಿದ್ದ ಇವರನ್ನು ಕಾರ್ಕಳ ತಾಲೂಕಿನ ಮಾಳನಡಿ ಪರ್ಕಳದ ಸಂಜೀವಿನಿ ಎಂಬ ಹುಡುಗಿ ವಿಶ್ವ ಹಿಂದೂ ಪರಿಷತ್​, ಭಜರಂಗದಳ ಕಾರ್ಯಕರ್ತರ ಸಹಕಾರದಿಂದ ಕಾಯರ್ತಡ್ಕದ ಉಮಾಮಹೇಶ್ವರ ದೇವಸ್ಥಾನದಲ್ಲಿ ಭಾನುವಾರ ನಡೆದ ಮದುವೆಯಲ್ಲಿ ಸಂಜೀವಿನಿ ಚಂದ್ರಶೇಖರ್ ಸತಿಪತಿಗಳಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು